ಕರ್ನಾಟಕ

karnataka

ETV Bharat / city

ಜಿಲ್ಲಾ ಬಂದ್​ಗೆ ಬೆಂಬಲ ನೀಡಿದ ಪುತ್ತೂರು ಜನತೆ

ಶುಕ್ರವಾರ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಮತ್ತು ಬೆಳ್ತಂಗಡಿ ತಾಲೂಕಿನ ಕಲ್ಲೇರಿ ಭಾಗದ ಇಬ್ಬರಿಗೆ ಕೊವಿಡ್​-19 ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಬಂದ್​ಗೆ ಕರೆ ನೀಡಲಾಗಿತ್ತು.

dakshina Kannada bandh
ಜಿಲ್ಲಾಬಂದ್​ಗೆ ಬೆಂಬಲ ನೀಡಿದ ಪುತ್ತೂರ ಜನತೆ

By

Published : Mar 28, 2020, 8:30 PM IST

ಪುತ್ತೂರು:ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಕರೆ ನೀಡಿದ್ದ ಸಂಪೂರ್ಣ ಬಂದ್​ಗೆ ಪುತ್ತೂರು ತಾಲೂಕಿನ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಳೆದ ನಾಲ್ಕು ದಿನಗಳಿಂದ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ, ತರಕಾರಿ, ಮೆಡಿಕಲ್ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಜನತೆಗೆ ಆವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ಅನಗತ್ಯ ಪ್ರವೇಶಗಳಿಗೆ ಕಡಿವಾಣ ಹಾಕಲು ಪೊಲೀಸರು ಹೆಣಗಾಡಿದ್ದರು. ಆದರೆ, ಶುಕ್ರವಾರ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಮತ್ತು ಬೆಳ್ತಂಗಡಿ ತಾಲೂಕಿನ ಕಲ್ಲೇರಿ ಭಾಗದ ಇಬ್ಬರಿಗೆ ಕೊವಿಡ್​-19 ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಶನಿವಾರ ಜಿಲ್ಲೆಯಲ್ಲಿ ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದರು.

ಜಿಲ್ಲಾಬಂದ್​ಗೆ ಬೆಂಬಲ ನೀಡಿದ ಪುತ್ತೂರ ಜನತೆ

ಕುಂಬ್ರ, ಸಂಟ್ಯಾರು, ಸಂಪ್ಯ, ದರ್ಬೆ, ಕಬಕ, ಬೊಳುವಾರು, ಹಾರಾಡಿ, ಉಪ್ಪಿನಂಗಡಿ ಮೊದಲಾದ ಕಡೆಗಳಲ್ಲಿ ಬ್ಯಾರಿಕೇಡ್​ ಅಳವಡಿಸಿದ ಪೊಲೀಸರು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಪ್ರಯತ್ನಿಸಿದವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು. ಅಗತ್ಯ ಪೂರೈಕೆಗಳಾದ ಹಾಲು - ಪತ್ರಿಕೆಗಳ ಮಾರಾಟ ಹಾಗೂ ಸಾಗಾಟಕ್ಕೂ ಸಮಸ್ಯೆ ಉಂಟಾಯಿತು. ಹೈವೇ ಪೆಟ್ರೋಲ್ ವಾಹನಗಳ ಮೂಲಕ ಸಂಚರಿಸಿದ ಪೊಲೀಸರು ಹಾಲು ಮಾರಾಟಗಾರರು, ಪತ್ರಿಕೆ ಮಾರಾಟದ ಅಂಗಡಿ, ಮನೆ ಮನೆಗೆ ಪೂರೈಕೆ ಮಾಡುವವರನ್ನು ಬೆದರಿಸಿ ಕಳುಹಿಸಿರುವ ಕುರಿತು ವರದಿಯಾಗಿದೆ.

ವೃದ್ಧರ ಕಾಳಜಿಗೆ ಮೆಚ್ಚುಗೆ:ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ವೃದ್ಧರ ಕುರಿತು ಕಾಳಜಿ ವಹಿಸಲಾಗುತ್ತಿದೆ. ಬೀಟ್ ಪೊಲೀಸರ ಮೂಲಕ ಸಂಪಾದಿಸಿದ ವೃದ್ಧರ ಮಾಹಿತಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿದ್ದು, ಕಚೇರಿಯಿಂದ ವೃದ್ಧರ ಆರೋಗ್ಯ ವಿಚಾರಣೆ ನಡೆಸುತ್ತಿರುವ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪುತ್ತೂರಿನ ಪತ್ರಕರ್ತರೊಬ್ಬರಿಗೆ ಫೋನ್ ಮಾಡಿದ ಕಚೇರಿಯವರು ತಾಯಿಯ ಆರೋಗ್ಯ ವಿಚಾರಿಸಿದ್ದರು. ಆದರೆ ಅವರ ತಾಯಿ ಕೆಲವು ವಾರಗಳ ಹಿಂದೆ ಮೃತಪಟ್ಟಿದ್ದರು. ಆದರೂ ಇಲಾಖೆಯ ಕಾಳಜಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪುತ್ತೂರು ನಗರದಲ್ಲಿ ದಿನಸಿ ಅಂಗಡಿಗಳ ಸಹಿತ ಎಲ್ಲಾ ವ್ಯಾಪಾರ ಬಂದ್ ಆಗಿತ್ತು. ಗ್ರಾಮೀಣ ಭಾಗದ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪೊಲೀಸರ ಅನುಮತಿ ಪಡೆದುಕೊಂಡು ಸುರಕ್ಷತಾ ಕ್ರಮಗಳ ಅನುಸರಣೆಯೊಂದಿಗೆ ಪಡಿತರ ವಿತರಣೆ ನಡೆಸಲಾಯಿತು. ಆದರೆ ನಗರ ವ್ಯಾಪ್ತಿಯಲ್ಲಿ ನ್ಯಾಯಬೆಲೆ ಅಂಗಡಿಗಳು ತೆರೆಯಲಿಲ್ಲ. ಆಂಬುಲೆನ್ಸ್ ಸೇರಿದಂತೆ ತುರ್ತು ಅವಶ್ಯಕತೆಗಳ ವಾಹನಗಳಿಗೆ ದರ್ಬೆ ಸರ್ಕಲ್ ಬಳಿಯ ಪೆಟ್ರೋಲ್ ಪಂಪ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿತ್ತು.

ABOUT THE AUTHOR

...view details