ಕರ್ನಾಟಕ

karnataka

ETV Bharat / city

ಬೆಳ್ತಂಗಡಿ ಸಂತ್ರಸ್ತರಿಗೆ ಕೊಡಗು ಮಾದರಿಯಲ್ಲಿ ಪರಿಹಾರ ನೀಡಿ: ಅಭಯಚಂದ್ರ ಜೈನ್

ಕೊಡಗಿನಲ್ಲಿ ಭೂಕುಸಿತವಾದಾಗ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಲು ಹತ್ತು ಲಕ್ಷ ರೂ. ಹಾಗೂ ಹತ್ತು ಸಾವಿರ ಬಾಡಿಗೆ ನೀಡಲಾಗಿತ್ತು. ಅದರಂತೆ ಬೆಳ್ತಂಗಡಿ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಅಭಯಚಂದ್ರ ಜೈನ್

By

Published : Aug 14, 2019, 3:33 PM IST

ಮಂಗಳೂರು:ನೆರೆ ಮತ್ತು ಭಾರಿ ಮಳೆಯಿಂದ ಹಾನಿಗೀಡಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರೆ ಹಾನಿ ಸಂತ್ರಸ್ತರಿಗೆ ಕೊಡಗು ಮಾದರಿಯಲ್ಲಿ ಪರಿಹಾರ ನೀಡಿ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಬೆಳ್ತಂಗಡಿ ತಾಲೂಕಿನ ನೆರೆ ಹಾನಿಯಾದ ಪ್ರದೇಶದ ಜನರು, ಕೃಷಿಯನ್ನು ಅವಲಂಬಿಸಿಕೊಂಡಿದ್ದರು. ನೆರೆಯಿಂದಾಗಿ ಮನೆ ಹಾಗೂ ಕೃಷಿಯನ್ನು ಕಳೆದುಕೊಂಡಿದ್ದಾರೆ. ಕೊಡಗಿನಲ್ಲಿ ಭೂಕುಸಿತವಾದಾಗ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಲು ಹತ್ತು ಲಕ್ಷ ರೂ. ಹಾಗೂ ಹತ್ತು ಸಾವಿರ ಬಾಡಿಗೆ ನೀಡಲಾಗಿತ್ತು. ಅದರಂತೆ ಬೆಳ್ತಂಗಡಿ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಅಭಯಚಂದ್ರ ಜೈನ್

ಕೊಡಗು ಭೂಕುಸಿತ ಸಂದರ್ಭದಲ್ಲಿ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಸಾಮಗ್ರಿ, ಆಹಾರ ವಸ್ತು, ಬಟ್ಟೆ ಬರೆ ಕಳೆದುಕೊಂಡವರಿಗೆ 50 ಸಾವಿರ ಪರಿಹಾರ ನೀಡಲಾಗಿತ್ತು. ಅದರಂತೆ ಬೆಳ್ತಂಗಡಿ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು.

ABOUT THE AUTHOR

...view details