ಮಂಗಳೂರು:ನಗರದ ಬಜ್ಪೆ ಸಮೀಪದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ಕಾಲೇಜನ್ನು ಒಂದು ವಾರದ ಕಾಲ ಬಂದ್ ಮಾಡಲಾಗಿದೆ.
ಬಜ್ಪೆ ಪಿಯು ಕಾಲೇಜಿನ ಉಪನ್ಯಾಸಕರು ತರಗತಿ ಆರಂಭದಲ್ಲೇ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಆದರೆ, ಅವರ ವರದಿ ಬರುವುದು ತಡವಾಗಿತ್ತು. ಈಗ ಬಂದಿರುವ ವರದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ 7 ದಿನಗಳ ಕಾಲ ಕಾಲೇಜು ಬಂದ್ ಮಾಡಲಾಗಿದೆ.