ಮಂಗಳೂರು :ರಾಷ್ಟ್ರಪಿತ ಮಹಾತ್ಮಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಜನ್ಮ ದಿನವನ್ನು ಮಂಗಳೂರಿನಲ್ಲಿ ಆಚರಣೆ ಮಾಡಿದ ಅಖಿಲ ಭಾರತ ಹಿಂದೂ ಮಹಾಸಭಾದ ವಿರುದ್ದ ಮಂಗಳೂರು ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಗೋಡ್ಸೆ ಜನ್ಮ ದಿನಾಚರಣೆ ಮಾಡಿ ಪೋಟೋ ಹರಿಯಬಿಟ್ಟ.. ಉದ್ಧಟತನ ತೋರಿದ ವ್ಯಕ್ತಿ ಅರೆಸ್ಟ್ - undefined
ಮಂಗಳೂರಿನಲ್ಲಿ ನಾಥೂರಾಮ್ ಗೋಡ್ಸೆ ದಿನಾಚರಣೆ ಮಾಡಿದ ಪೋಟೋವನ್ನು ಮಾಧ್ಯಮಗಳಲ್ಲಿ ಹರಿಬಿಟ್ಟಿರುವುದನ್ನು ಗಮನಿಸಿದ ಪೊಲೀಸರು ಪೋಟೋದಲ್ಲಿದ್ದ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸಿ, ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿವಾದದ ನಡುವೆಯೂ ಗೋಡ್ಸೆ ಜನ್ಮ ದಿನಾಚರಣೆ
ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯ ಪ್ರಭಾರಿ ರಾಜೇಶ್ ಪೂಜಾರಿ ಬಂಧಿತ ವ್ಯಕ್ತಿ. ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯಧ್ಯಕ್ಷ ಎಲ್ ಕೆ ಸುವರ್ಣ, ರಾಜೇಶ್ ಪೂಜಾರಿ, ಧರ್ಮೇಂದ್ರ, ಲೋಕೇಶ್ ಸೇರಿದಂತೆ ಐವರ ವಿರುದ್ದ ಉಳ್ಳಾಲ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದೆ.
ನಾಥೂರಾಮ್ ಗೋಡ್ಸೆ ಜನ್ಮದಿನ ಆಚರಣೆ ಮಾಡಿದ ಪೋಟೋ ಮಾಧ್ಯಮಗಳಲ್ಲಿ ಬಂದಿರುವುದನ್ನು ಗಮನಿಸಿದ ಪೊಲೀಸರು, ಪೋಟೋದಲ್ಲಿದ್ದ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಇತರರು ಭಾಗಿಯಾಗಿದ್ದು ವಿಚಾರಣೆಯಲ್ಲಿ ತಿಳಿದುಬಂದರೆ ಅವರ ಮೇಲೂ ಕ್ರಮಕ್ಕೆ ಪೊಲೀಸರು ನಿರ್ಧರಿಸಿದ್ದಾರೆ.