ಕರ್ನಾಟಕ

karnataka

ETV Bharat / city

ಸ್ವಂತ ಸಹೋದರಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಲೆಗೈದ ಅಣ್ಣ.. ಕಡಲೂರಿನಲಿ ಇದೆಂಥಾ ದ್ವೇಷ? - ಪೊಲೀಸರು ತನಿಖೆ

ಫಿಯೋನಾ ಸಹೋದರ ಸ್ಯಾಮ್ಸನ್ ಕುಟಿನ್ಹ ಕ್ಷುಲ್ಲಕ‌ ಕಾರಣಕ್ಕಾಗಿ ಹತ್ಯೆ ಮಾಡಿದ್ದಾನೆ. ಈ ಸಂದರ್ಭ ಪೊಲೀಸರು ಸ್ಯಾಮ್ಸನ್‌ ಬಗ್ಗೆ ಪೋಷಕರಲ್ಲಿ ಕೇಳಿದಾಗ, ಆತ ಮಂಗಳೂರಿಗೆ ಹೋಗಿದ್ದಾಗಿ ತಿಳಿದು ಬಂದಿದೆ. ಪೊಲೀಸರು ಸ್ಯಾಮ್ಸನ್‌ನನ್ನು ಕರೆಸಿ ವಿಚಾರಣೆ ನಡೆಸಿದಾಗ ಆತ ಸ್ವಂತ ಸಹೋದರಿಯನ್ನೇ ಕ್ಷುಲ್ಲಕ ಕಾರಣಕ್ಕಾಗಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆಂದು ತಿಳಿದು ಬಂದಿದೆ.

girl-murder-in-mangalore

By

Published : Oct 26, 2019, 11:40 PM IST

ಮಂಗಳೂರು: ಸ್ವಂತ ಸಹೋದರಿಯನ್ನೇ ಸುತ್ತಿಗೆಯಿಂದ ಹೊಡೆದು ಅಣ್ಣ ಹತ್ಯೆ ಮಾಡಿರೋ ಘಟನೆ ನಗರದ ಹೊರವಲಯದ ಮುಡಿಪು ಎಂಬಲ್ಲಿ ನಡೆದಿದೆ.

ಫಿಯೋನಾ ಸ್ವೇಡಲ್ ಕುಟಿನ್ಹ (16) ಮೃತ ಯುವತಿ. ನಗರದ ಕಾಲೇಜಿನಲ್ಲಿ ಪಿಯುಸಿಯಲ್ಲಿ ಓದುತ್ತಿದ್ದ ಫಿಯೋನಾ ಅ.8 ರಿಂದ ಕಾಣೆಯಾಗಿದ್ದರು. ಪಜೀರ್‌ ಗ್ರಾಮದ ಫ್ರಾನ್ಸಿಸ್ ಕುಟಿನ್ಹ ಅವರು ತಮ್ಮ ಪುತ್ರಿ ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಆಕೆಯ ಸಹೋದರನೇ ಕೊಲೆ ಮಾಡಿರುವ ಭಯಾನಕ ಸತ್ಯ ಹೊರಬಂದಿದೆ.

ಫಿಯೋನಾ ಸಹೋದರ ಸ್ಯಾಮ್ಸನ್ ಕುಟಿನ್ಹ ಕ್ಷುಲ್ಲಕ‌ ಕಾರಣಕ್ಕಾಗಿ ಹತ್ಯೆ ಮಾಡಿದ್ದಾನೆ. ಈ ಸಂದರ್ಭ ಪೊಲೀಸರು ಸ್ಯಾಮ್ಸನ್‌ ಬಗ್ಗೆ ಪೋಷಕರಲ್ಲಿ ಕೇಳಿದಾಗ, ಆತ ಮಂಗಳೂರಿಗೆ ಹೋಗಿದ್ದಾಗಿ ತಿಳಿದು ಬಂದಿದೆ. ಪೊಲೀಸರು ಸ್ಯಾಮ್ಸನ್‌ನನ್ನು ಕರೆಸಿ ವಿಚಾರಣೆ ನಡೆಸಿದಾಗ ಆತ ಸ್ವಂತ ಸಹೋದರಿಯನ್ನೇ ಕ್ಷುಲ್ಲಕ ಕಾರಣಕ್ಕಾಗಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆಂದು ತಿಳಿದು ಬಂದಿದೆ.

ಈ ಬಗ್ಗೆ ಹೆಚ್ಚಿನ ವಿವರಗಳು ತನಿಖೆಯಿಂದ ತಿಳಿದು ಬರಬೇಕಾಗಿದೆ. ಅಲ್ಲದೆ ದೊರಕಿರುವ ಮೃತದೇಹ ಫಿಯೋನಾ ಕುಟಿನ್ಹ ಅವರದ್ದೇ ಎಂದು ವಿಧಿ ವಿಜ್ಞಾನ ಪರೀಕ್ಷೆಯಿಂದ ಸಾಬೀತಾಗಬೇಕಾಗಿದೆ.

ABOUT THE AUTHOR

...view details