ಬೆಳ್ತಂಗಡಿ(ದಕ್ಷಿಣ ಕನ್ನಡ):ಪ್ರಕೃತಿ ವಿಸ್ಮಯಕಾರಿ. ಪ್ರಕೃತಿಯಲ್ಲಿ ಅದೆಷ್ಟೋ ಕುತೂಹಲ ಮೂಡಿಸುವ ವಿಸ್ಮಯಗಳು ನಡೆಯುತ್ತಿರುತ್ತವೆ. ಅಂತಹ ಒಂದು ವಿಸ್ಮಯ ಬೆಳ್ತಂಗಡಿ ತಾಲೂಕಿನಲ್ಲಿ ಕಂಡುಬಂದಿದೆ. ತನ್ನ ಜೀವಿತಾವಧಿಯಲ್ಲಿ ಒಂದು ಬಾರಿ ಮಾತ್ರ ಹೂ ಬಿಡುವ ತೀರಾ ಅಪರೂಪದ ಮರಗಳಲ್ಲಿ ಒಂದಾದ ಶ್ರೀತಾಳೆ (ಪನೋಲಿ) ಮರ ಕರಿಮಣೇಲು ದೇವಸ್ಥಾನದ ಬಳಿ ಕಂಡು ಹೂಬಿಟ್ಟಿದ್ದು, ಇದರ ಅಂದವನ್ನು ನೋಡಿ ಜನ ಕಣ್ತುಂಬಿಕೊಳ್ಳುತ್ತಿದ್ದಾರೆ.
ತಾಳೆ ಮರದಂತೆ ಎತ್ತರಕ್ಕೆ ಬೆಳೆಯುವ ಈ ಮರವು ತನ್ನ ಜೀವಿತಾವಧಿಯಲ್ಲಿ ಒಂದು ಬಾರಿ ಹೂವಿನಿಂದಲೇ ಆವೃತವಾಗಿ ಅತ್ಯಂತ ಆಕರ್ಷಣೀಯವಾಗಿ ಕಂಡು ಬರುತ್ತಿದೆ. ತುಳುವಿನಲ್ಲಿ ಪನೋಲಿ ಮರ, ಕನ್ನಡದಲ್ಲಿ ಶ್ರೀತಾಳೆ ಮರ ಎನ್ನುವುದು ರೂಢಿ. ಇದು ಸುಮಾರು 70 ರಿಂದ 80ವರ್ಷಕ್ಕೆ ಹೂ ಬಿಟ್ಟು ಬಳಿಕ ಸಾಯುತ್ತದೆ. ಕರಿಮಣೇಲು ದೇವಸ್ಥಾನದ ಚಂದ್ರಶೇಖರ ಅಸ್ರಣ್ಣರಿಗೆ ಸೇರಿದ ತೋಟದಲ್ಲಿ ಮರ ಹೂ ಬಿಟ್ಟಿರುವ ಅದ್ಭುತ ದೃಶ್ಯ ಕಂಡು ಬಂದಿದೆ. ಅಸ್ರಣ್ಣರಿಗೆ ಸುಮಾರು 73 ವರ್ಷ ವಯಸ್ಸಾಗಿದ್ದು, ಚಿಕ್ಕವಯಸ್ಸಿನಲ್ಲೇ ತೋಟದಲ್ಲಿ ಈ ಮರ ಕಂಡಿದ್ದನ್ನು ಅವರು ನೆನಪಿಸುತ್ತಾರೆ. ಹಾಗಾಗಿ ಈ ಮರಕ್ಕೆ 70 ವರ್ಷ ದಾಟಿರಬಹುದೆಂದು ಎಂದು ಅವರು ಅಂದಾಜಿಸಿದ್ದಾರೆ.
ಹಿರಿಯರೊಬ್ಬರು ಹೇಳುವ ಪ್ರಕಾರ, ಹಿಂದಿನ ಕಾಲದಲ್ಲಿ ಈ ಮರದ ಗರಿಯಿಂದ ದೇವರ ಸತ್ತಿಗೆ (ಕೊಡೆ)ಯನ್ನು ಮಾಡುತ್ತಿದ್ದರು. ಅಲ್ಲದೆ ಗೊರಬೆ (ಕೊರಂಬು) ಮಾಡಲು ಉಪಯೋಗಿಸುತ್ತಿದ್ದರು ಎನ್ನುತ್ತಾರೆ. ಶ್ರೀತಾಳೆ ಮರ ಅತ್ಯಂತ ಪವಿತ್ರ ಮರವಾಗಿದ್ದು, ರೋಗ ನಿರೋಧಕ ಶಕ್ತಿ ವೃದ್ಧಿಯಾಗಲು ರಾಮಬಾಣ ಎನ್ನಲಾಗ್ತಿದೆ.
ಮರ ಕಡಿಯಲು ಸಿದ್ಧತೆ