ಬಂಟ್ವಾಳ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ಮತ್ತು ತುಂಬೆ ಮಸೀದಿ ಮುಖಂಡರ ಸಭೆ ನಡೆಯಿತು. ಈ ವೇಳೆ, ಜಿಲ್ಲಾಡಳಿತ ನೀಡಿದ ಸೂಚನೆಯನ್ನು ಪಾಲಿಸುವಂತೆ ಡಿವೈಎಸ್‌ಪಿ ವೆಲಂಟೈನ್ ಡಿಸೋಜ ಸಲಹೆ ನೀಡಿದ್ದಾರೆ.
ಬಕ್ರೀದ್: ಹಬ್ಬದ ವೇಳೆ ಜಿಲ್ಲಾಡಳಿತದ ಸೂಚನೆ ಪಾಲಿಸಲು ಡಿವೈಎಸ್‌ಪಿ ಸಲಹೆ
ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಆಚರಣೆ ಸಂದರ್ಭದಲ್ಲಿ ಕೋವಿಡ್-19 ಬಗ್ಗೆ ಭಯಪಡುವ ಅಗತ್ಯ ಇಲ್ಲ. ವೈರಸ್ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಡಿವೈಎಸ್‌ಪಿ ವೆಲಂಟೈನ್ ಡಿಸೋಜ ತಿಳಿಸಿದರು.
ಬಂಟ್ವಾಳ ಗ್ರಾಮಾಂತರ ಠಾಣಾ ಎಸ್‌ಐ ಪ್ರಸನ್ನ ಕುಮಾರ್ ಅಧ್ಯಕ್ಷತೆಯಲ್ಲಿ ಫರಂಗಿಪೇಟೆ ಹೊರಠಾಣೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಡಿವೈಎಸ್‌ಪಿ, ಕೋವಿಡ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಕೊರೊನಾ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ. ಹಾಗಾಗಿ ಮಸೀದಿಗೆ ಬರುವ ವೇಳೆ ಮುಂಜಾಗ್ರತಾ ಕ್ರಮವಾಗಿ ವಯಸ್ಸಾದವರು ಮತ್ತು ಮಕ್ಕಳ ಸುರಕ್ಷತೆಗೆ ಗಮನ ನೀಡಿ ಎಂದರು.
ಈ ಸಂದರ್ಭದಲ್ಲಿ ಫರಂಗಿಪೇಟೆ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಉಮರ್ ಫಾರೂಕ್, ಪುದು ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಟಿ.ಕೆ.ಬಶೀರ್ ಫರಂಗಿಪೇಟೆ, ಇಮ್ತಿಯಾಜ್ ಆಲ್ಫಾ ತುಂಬೆ, ಗೋಲ್ಡನ್ ಅಬ್ದುಲ್ ಲತೀಫ್ ಹಾಗೂ ಪುದು ಗ್ರಾಮದ ಮಸೀದಿ ಆಡಳಿತ ಕಮಿಟಿಯ ಮುಖಂಡರು ಉಪಸ್ಥಿತರಿದ್ದರು.