ಮಂಗಳೂರು :ಕೊರೊನಾ ಕಾರಣದಿಂದಾಗಿ ರದ್ದಾಗಿದ್ದ ಮಂಗಳೂರು ಮತ್ತು ನವದೆಹಲಿ ನಡುವಿನ ವಿಮಾನಯಾನ ಸೇವೆ ಮತ್ತೆ ಆರಂಭವಾಗಿದೆ. ಇಂಡಿಗೋ ಏರ್ಲೈನ್ಸ್ನ ವಿಮಾನ ವಾರದಲ್ಲಿ ನಾಲ್ಕು ದಿನ ಅಂದರೆ ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ ಇರಲಿದೆ. ಮಂಗಳೂರಿನಿಂದ ನವದೆಹಲಿಗೆ ತಲುಪಬೇಕಿದ್ದರೆ ಈ ಮೊದಲು ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ಗೆ ತೆರಳಿ ಅಲ್ಲಿಂದ ಬೇರೆ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಈಗ ಆರಂಭವಾಗಿರುವ ವಿಮಾನ ಪುಣೆ ಮೂಲಕ ನವದೆಹಲಿ ತಲುಪಲಿದೆ.
ಮಂಗಳೂರಿನಿಂದ ಮುಂಜಾನೆ 2.45ಕ್ಕೆ ಟೇಕಾಪ್ ಆಗುವ ವಿಮಾನ, ಮುಂಜಾನೆ 4.20ಕ್ಕೆ ಪುಣೆಯಲ್ಲಿ ಲ್ಯಾಂಡ್ ಆಗಲಿದೆ. 35 ನಿಮಿಷ ವಿಶ್ರಾಂತಿ ಬಳಿಕ ಪುಣೆಯಿಂದ ಹೊರಡುವ ವಿಮಾನ ಬೆಳಗ್ಗೆ 6.55ಕ್ಕೆ ನವದೆಹಲಿ ತಲುಪಲಿದೆ. ಇದೇ ವೇಳೆ ನವದೆಹಲಿಯಿಂದ ರಾತ್ರಿ 9.05ಕ್ಕೆ ಟೇಕಾಪ್ ಆಗುವ ವಿಮಾನ ರಾತ್ರಿ 11.05ಕ್ಕೆ ಪುಣೆ ತಲುಪಿ ಅಲ್ಲಿ 40 ನಿಮಿಷ ಕಾಲ ತಂಗಿ 11.45ಕ್ಕೆ ಹೊರಟು 1.20ಕ್ಕೆ ಮಂಗಳೂರು ತಲುಪಲಿದೆ.