ಕರ್ನಾಟಕ

karnataka

ETV Bharat / city

ಶವಾಗಾರದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ.. ಕುಟುಂಬಸ್ಥರಿಂದ ಪ್ರತಿಭಟನೆ - Mangalore crime news

ನಗರದ ದೇರಳಕಟ್ಟೆಯ ಯೆನೆಪೋಯ ಶವಾಗಾರದಲ್ಲಿರಿಸಿದ ಮೃತದೇಹವೊಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

carcass-in-rotten-condition

By

Published : Oct 27, 2019, 9:01 PM IST

ಮಂಗಳೂರು:ನಗರದ ದೇರಳಕಟ್ಟೆಯ ಯೆನೆಪೋಯ ಶವಾಗಾರದಲ್ಲಿರಿಸಿದ ಮೃತದೇಹವೊಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಯ ವಿರುದ್ಧ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತೊಕ್ಕೊಟ್ಟು ನಿವಾಸಿ ವಿಲ್ಸನ್ ಫೆರ್ನಾಂಡಿಸ್ ವಿದ್ಯುತ್ ಆಘಾತಕ್ಕೊಳಗಾಗಿ ಶುಕ್ರವಾರ ಮೃತಪಟ್ಟಿದ್ದರು. ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದ ಮೃತದೇಹವನ್ನು ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಇಂದು ಕೇಳಿದ್ದರು. ಆದರೆ, ವಿಲ್ಸನ್ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು.

ಕುಟುಂಬಸ್ಥರಿಂದ ಪ್ರತಿಭಟನೆ..

ಸ್ಥಳದಲ್ಲಿ ಎಸಿಪಿ ಕೋದಂಡರಾಮ, ಉಳ್ಳಾಲ ಪೊಲೀಸ್ ಇನ್ಸ್‌​ಸ್ಪೆಕ್ಟರ್ ಗೋಪಿಕೃಷ್ಣ ಅವರ ನೇತೃತ್ವದಲ್ಲಿ ಸಂಪೂರ್ಣ ಬಂದೋಬಸ್ತ್​​ ಏರ್ಪಡಿಸಲಾಗಿತ್ತು. ಬಳಿಕ ಶಾಸಕ ಯು ಟಿ ಖಾದರ್ ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ABOUT THE AUTHOR

...view details