ಮಂಗಳೂರು: ಮತದಾನ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಚುನಾವಣಾ ಆಯೋಗ 40 ಕಾಲೇಜಿನ ವಿದ್ಯಾರ್ಥಿಗಳನ್ನು ಕ್ಯಾಂಪಸ್ ರಾಯಭಾರಿ ಎಂದು ಆಯ್ಕೆ ಮಾಡಿ ತರಬೇತಿ ನೀಡಿದೆ.
ದ.ಕ ಜಿಲ್ಲಾ ಸ್ವೀಪ್ ನಿಂದ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಅವರಿಗೆ ತಮ್ಮಕಾಲೇಜಿನಲ್ಲಿ ಮತ ಚಲಾವಣೆ ಬಗ್ಗೆ ಪ್ರಚಾರ ಮಾಡಲು ತರಬೇತಿ ನೀಡಲಾಗಿದೆ. ದ.ಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳು ತರಬೇತಿ ಆಯೋಜಿಸಿದ್ದರು. ವಿದ್ಯಾರ್ಥಿಗಳನ್ನು ಬ್ರಾಂಡ್ ಅಂಬಾಸಿಡಾರ್ ಮಾಡಿ ಅವರಿಗೆ ಚುನಾವಣಾ ಪ್ರಕ್ರಿಯೆ, ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಯಿತು. ಡೆಮೊ ಮತಯಂತ್ರ ಗಳ ಮೂಲಕ ಮತದಾನ ಮಾಡಿಸಿ ಅವರಿಗೆ ಮತದಾನ ಮಾಡುವ ಬಗ್ಗೆ ತಿಳಿಸಲಾಯಿತು.
ಚುನಾವಣಾ ಪ್ರಚಾರಕ್ಕೆ ಕ್ಯಾಂಪಸ್ ಬ್ರಾಂಡ್ ಅಂಬಾಸಡರ್- ವಿದ್ಯಾರ್ಥಿಗಳಿಗೆ ತರಬೇತಿ - students
ಮಂಗಳೂರಿನಲ್ಲಿ ವಿದ್ಯಾರ್ಥಿಗಳನ್ನು ಬ್ರಾಂಡ್ ಅಂಬಾಸಡರ್ ಮಾಡಿ ಅವರಿಗೆ ಚುನಾವಣಾ ಪ್ರಕ್ರಿಯೆ, ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಯಿತು.
ಚುನಾವಣಾ ಪ್ರಚಾರ
ಈ ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಮತ್ತು ಪರಿಸರದಲ್ಲಿ ಚುನಾವಣಾ ಜಾಗೃತಿ ಮೂಡಿಸಲು ಅನುಕೂಲವಾಗುವಂತೆ ಈ ತರಬೇತಿ ನೀಡಲಾಗಿದೆ.ಈ ಮೂಲಕ ವಿದ್ಯಾರ್ಥಿಗಳನ್ನು ಬ್ರಾಂಡ್ ಅಂಬಾಡಿಡಾರ್ ಮಾಡಿ ಈ ಬಾರಿ ಕಳೆದ ಬಾರಿಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಮತದಾನ ಮಾಡಿಸುವ ಉದ್ದೇಶ ಸ್ವೀಪ್ ಸಮಿತಿಯದ್ದಾಗಿದೆ.