ಕರ್ನಾಟಕ

karnataka

ETV Bharat / city

ಬಿಜೆಪಿಯಿಂದ ನೀತಿ ಸಂಹಿತೆ ಉಲ್ಲಂಘನೆ: ಮಾಜಿ ಸಚಿವ ಬಿ. ರಮಾನಾಥ ರೈ ಆರೋಪ

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾವು ರಾಜಧರ್ಮವನ್ನು ಪಾಲಿಸುತ್ತಿದ್ದರೆ, ಬಿಜೆಪಿ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ. ಮಾತ್ರವಲ್ಲದೆ ಬಿಜೆಪಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದಿದ್ದಾರೆ.

Bjp Violating code of conduct in Gram Panchayat Election-Ex Minister Ramanath rai
ಬಿಜೆಪಿಯಿಂದ ನೀತಿಸಂಹಿತೆ ಕಡೆಗಣನೆ: ಮಾಜಿ ಸಚಿವ ಬಿ. ರಮಾನಾಥ ರೈ ಆರೋಪ

By

Published : Dec 20, 2020, 5:33 AM IST

ಬಂಟ್ವಾಳ: ಈ ಬಾರಿಯ ಗ್ರಾ.ಪಂ. ಚುನಾವಣೆ ಪಕ್ಷಾತೀತವಾಗಿ ನಡೆಯಬೇಕು ಎಂದು ಚುನಾವಣಾ ಆಯೋಗ ಹೇಳುತ್ತಲೇ ಬಂದಿದ್ದರೂ ಬಿಜೆಪಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ. ರಾಜಧರ್ಮವನ್ನು ನಾವು ಪಾಲಿಸುತ್ತಿದ್ದರೆ, ಬಿಜೆಪಿ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಚುನಾವಣಾ ಆಯೋಗದ ನೀತಿಸಂಹಿತೆಯನ್ನು ಪಾಲಿಸಿದ್ದೇವೆ. ಆದರೆ ಬಿಜೆಪಿ ನೀತಿಸಂಹಿತೆಯನ್ನು ಸಂಪೂರ್ಣವಾಗಿ ಕಡೆಗಣನೆ ಮಾಡಿದೆ. ಶಾಸಕರ ಭಾವಚಿತ್ರ, ಚಿಹ್ನೆಯನ್ನು ಹಾಕಿ ಮನೆ ಮನೆಗೆ ಕರಪತ್ರ ಹಂಚಿದ್ದಾರೆ. ನಾವು ರಾಜಧರ್ಮವನ್ನು ಪಾಲಿಸಿದ್ದೇವೆ. ಇವರು ರಾಜಧರ್ಮವನ್ನು ಪಾಲಿಸಿಲ್ಲ. ಪ್ರಜ್ಞಾವಂತ ಮತದಾರರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಮೂಲಕಾಂಗ್ರೆಸಿಗರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುತ್ತಿಲ್ಲ. ಆವತ್ತಿಂದ ಇವತ್ತಿನವರೆಗೂ ನನ್ನೊಂದಿಗೆ ಇದ್ದವರು ಈಗಲೂ ಇದ್ದಾರೆ. ಎರಡು ಅವಧಿಯವರೆಗೆ ನನ್ನ ಜೊತೆಗೆ ಇದ್ದ ಮಾಧವ ಮಾವೆ ಪಕ್ಷ ತ್ಯಜಿಸಿದ್ದಾರೆ. ನನ್ನ ಜೊತೆ ಇದ್ದವರು ಇವರಿಗೆ ಯಾಕೆ ಜಾಸ್ತಿ ಅವಕಾಶ ಕೊಟ್ಟಿದ್ದೀರಿ ಎಂದು ಉಳಿದವರು ಕೇಳುತ್ತಿದ್ದರೂ ಇವರಿಗೆ ಅವಕಾಶ ಕೊಟ್ಟಿದ್ದೇನೆ. ನಾನು ಯಾವುದೇ ತೊಂದರೆಯನ್ನು ಅವರಿಗೆ ಮಾಡಿಲ್ಲ. ಅವರಿಗೆ ಮಹತ್ವಾಕಾಂಕ್ಷೆ ಇರಬಹುದು ಅದನ್ನು ನನ್ನಿಂದ ಪೂರೈಸಲು ಸಾಧ್ಯವಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ನನ್ನನ್ನು ಬಿಟ್ಟು ಹೋಗುವುದಿಲ್ಲ. ಇದರಿಂದ ಪಕ್ಷಕ್ಕೆ ಹಿನ್ನಡೆ ಆಗಿಲ್ಲ ಎಂದು ರೈ ಹೇಳಿದರು.

ABOUT THE AUTHOR

...view details