ಮಂಗಳೂರು: ಬಿಜೆಪಿಗೆ ಈಗ ಆಪರೇಷನ್ ಕಮಲ ಅವಶ್ಯಕತೆ ಇಲ್ಲ. ಪಕ್ಷಕ್ಕೆ ಸೇರಲು ಆಸಕ್ತಿ ಹೊಂದಿರುವವರನ್ನಷ್ಟೇ ಈಗ ಸೇರ್ಪಡೆ ಮಾಡಲಾಗುತ್ತಿದೆ. ಬೇರೆ ಬೇರೆ ಪಕ್ಷಗಳಿಂದ ಪಕ್ಷದ ವಿಚಾರಧಾರೆಗಳನ್ನು ಒಪ್ಪಿ ಬಂದಾಗ ಸ್ವಾಗತಿಸಲಾಗುತ್ತದೆ. ಯಾರೆ ಬಂದರೂ ಕಾರ್ಯಕರ್ತರಲ್ಲಿ ಸಹಜವಾದ ವಿರೋಧ ಇದ್ದೆ ಇರುತ್ತದೆ. ಯಾಕೆಂದರೆ ಹಿಂದೆ ಅವರ ವಿರುದ್ಧ ಹೋರಾಟ ಮಾಡಲಾಗಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅಕ್ರಮದ ಬಗ್ಗೆ ತಿಳಿಯುತ್ತಿದ್ದಂತೆ ತನಿಖೆಗೆ ಸರ್ಕಾರ ಆದೇಶಿಸಿದೆ. ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ. ಯಾವುದೇ ಪಕ್ಷದವರಾದರೂ ತಪ್ಪಿತಸ್ಥರನ್ನು ಬಂಧಿಸಲಾಗುತ್ತದೆ. ಅಶ್ವತ್ಥ ನಾರಾಯಣ ಅವರು ಈ ಬಗ್ಗೆ ಈಗಾಗಲೇ ಉತ್ತರ ಕೊಟ್ಟಿದ್ದಾರೆ.