ಮಂಗಳೂರು:ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ಗೆ ಇಬ್ಬರು ನೂತನ ಎಕ್ಸಿಕ್ಯೂಟಿವ್ ಡೈರೆಕ್ಟರ್ಗಳು ನೇಮಕವಾಗಿದ್ದಾರೆ.
ಎಂಆರ್ಪಿಎಲ್ನ ರಿಫೈನರಿ ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಎಲಾಂಗೋ ಎಂ, ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಬಿಹೆಚ್ವಿ ಪ್ರಸಾದ್ ನೇಮಕವಾಗಿದ್ದಾರೆ.
ಎಂಆರ್ಪಿಎಲ್ನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹುದ್ದೆ ಈ ಹಿಂದೆ ಇರಲಿಲ್ಲ. ಇದೇ ಮೊದಲ ಬಾರಿಗೆ ಈ ಹುದ್ದೆ ಸೃಷ್ಟಿಸಲಾಗಿದ್ದು, ಎಂಆರ್ಪಿಎಲ್ನಲ್ಲಿ ಈ ಹಿಂದೆ ಗ್ರೂಪ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಇಬ್ಬರು ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಬಡ್ತಿ ಹೊಂದಿದ್ದಾರೆ.
ಬಿಹೆಚ್ವಿ ಪ್ರಸಾದ್ ಜಿಲ್ಲೆಯ ಮುಲ್ಕಿಯವರಾಗಿದ್ದು, ಎಲಾಂಗೋ ಎಂ, ತಮಿಳುನಾಡು ಮೂಲದವರಾಗಿದ್ದಾರೆ. ಹೊಸ ಹುದ್ದೆಗೆ ನೇಮಕವಾದ ತಕ್ಷಣ ಇಬ್ಬರು ಕೂಡ ಅಧಿಕಾರ ಸ್ವೀಕರಿಸಿದ್ದಾರೆ.