ಕರ್ನಾಟಕ

karnataka

By

Published : Nov 21, 2021, 4:33 PM IST

ETV Bharat / city

ಬೀದಿಬದಿ ಅನಾಥ ನಾಯಿ, ಬೆಕ್ಕಿನ ಮರಿಗಳಿಗೆ ಆಶ್ರಯ : ಪ್ರಾಣಿಗಳನ್ನು ದತ್ತು ನೀಡುತ್ತದೆ ಸಂಸ್ಥೆ

ಎನಿಮಲ್ ಕೇರ್ ಟ್ರಸ್ಟ್‌ ಪ್ರಾಣಿಗಳನ್ನು ದತ್ತು ಸ್ವೀಕರಿಸುವವರಿಗೆ ಕೆಲ ನಿಯಮಗಳನ್ನು ವಿಧಿಸುತ್ತದೆ. ದತ್ತು ಸ್ವೀಕರಿಸುವ ಎಲ್ಲರೂ ಆ ಬಳಿಕ ಪ್ರಾಣಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಬೇಕು. ತಿಂಗಳಿಗೊಮ್ಮೆ ಪ್ರಾಣಿಗಳ ಬಗ್ಗೆ ಅನಿಮಲ್ ಕೇರ್ ಟ್ರಸ್ಟ್‌ಗೆ ವರದಿ ಕೊಡುತ್ತಿರಬೇಕು..

ಬೀದಿಬದಿ ಅನಾಥ ನಾಯಿ, ಬೆಕ್ಕು ಮರಿಗಳಿಗೆ ಆಶ್ರಯ
ಬೀದಿಬದಿ ಅನಾಥ ನಾಯಿ, ಬೆಕ್ಕು ಮರಿಗಳಿಗೆ ಆಶ್ರಯ

ಮಂಗಳೂರು :ಸಾಮಾನ್ಯವಾಗಿ ಸಾಕಷ್ಟು ದುಡ್ಡು ಕೊಟ್ಟು ವಿಶೇಷ ತಳಿಯ ನಾಯಿ, ಬೆಕ್ಕಿನ ಮರಿಗಳನ್ನು ಎಲ್ಲರೂ ಮನೆಯಲ್ಲಿ ತಂದು ಸಾಕುತ್ತಾರೆ. ಆದರೆ, ಮಂಗಳೂರಿನಲ್ಲೊಂದು ಸಂಸ್ಥೆ ಬೀದಿ ಬದಿಯಲ್ಲಿ ಅನಾಥವಾಗಿ ಬಿದ್ದಿರುವ ನಾಯಿ-ಬೆಕ್ಕಿನ ಮರಿಗಳಿಗೆ ದಾರಿ ತೋರಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಮೂಲಕ ಅನಾಥ ಪ್ರಾಣಿಗಳಿಗೆ ಆಶ್ರಯ ಒದಗಿಸುವ ಕಾರ್ಯ ಮಾಡುತ್ತಿದ್ದಾರೆ.

ಬೀದಿಬದಿಯ ಅನಾಥ ನಾಯಿ, ಬೆಕ್ಕಿನ ಮರಿಗಳಿಗೆ ಆಶ್ರಯ..

ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್ ಸಂಸ್ಥೆ ಬೀದಿ ಬದಿಯಲ್ಲಿ ಅನಾಥವಾಗಿರುವ ನಾಯಿ, ಬೆಕ್ಕಿನ ಮರಿಗಳನ್ನು ತಂದು ಶುಶ್ರೂಷೆ ಮಾಡುತ್ತಾರೆ. ಅದೇ ರೀತಿ ರೇಬಿಸ್‌ನಂತಹ ಸೋಂಕು ಹರಡದಂತೆ ಲಸಿಕೆ ನೀಡಿ ಪೋಷಣೆ ಮಾಡುತ್ತಾರೆ. ಅಲ್ಲದೆ ಅಗತ್ಯವಿರುವವರಿಗೆ ದತ್ತು ನೀಡುವ ಪ್ರಕ್ರಿಯೆಯನ್ನು ಮಾಡುತ್ತಾರೆ.

ಯಾವ ರಸ್ತೆಯಲ್ಲಿ ಅನಾಥವಾಗಿ ಬಿದ್ದಿರುವ ಬೆಕ್ಕಿನ ಮರಿಗಳನ್ನು ಕಂಡರೂ ಅವುಗಳಿಗೆ ತಮ್ಮ ಅನಿಮಲ್ ಕೇರ್ ಟ್ರಸ್ಟ್‌ನಲ್ಲಿ ಆಶ್ರಯ ನೀಡುತ್ತಾರೆ. ಉತ್ತಮ ಶೆಲ್ಟರ್ ವ್ಯವಸ್ಥೆ ಮಾಡಿ, ಉತ್ತಮ ಆಹಾರ ಒದಗಿಸಿ ಪೋಷಣೆ ಮಾಡುತ್ತಾರೆ.

ಅಲ್ಲದೆ ಅಗತ್ಯವಿರುವವರಿಗೆ ಉಚಿತವಾಗಿ ದತ್ತು ನೀಡುತ್ತಾರೆ. ಇಂದು ನಗರದ ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆಯಲ್ಲಿ ಅನಿಮಲ್ ಕೇರ್ ಟ್ರಸ್ಟ್ ಪ್ರಾಣಿಗಳ ಉಚಿತ ದತ್ತು ಕೊಡುವ ಶಿಬಿರ ಆಯೋಜಿಸಲಾಗಿದೆ. ಸಾಕಷ್ಟು ನಾಯಿ-ಬೆಕ್ಕಿನ ಮರಿಗಳು ದತ್ತು ನೀಡಲಾಗಿದೆ.

ಎನಿಮಲ್ ಕೇರ್ ಟ್ರಸ್ಟ್‌ ಪ್ರಾಣಿಗಳನ್ನು ದತ್ತು ಸ್ವೀಕರಿಸುವವರಿಗೆ ಕೆಲ ನಿಯಮಗಳನ್ನು ವಿಧಿಸುತ್ತದೆ. ದತ್ತು ಸ್ವೀಕರಿಸುವ ಎಲ್ಲರೂ ಆ ಬಳಿಕ ಪ್ರಾಣಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಬೇಕು. ತಿಂಗಳಿಗೊಮ್ಮೆ ಪ್ರಾಣಿಗಳ ಬಗ್ಗೆ ಅನಿಮಲ್ ಕೇರ್ ಟ್ರಸ್ಟ್‌ಗೆ ವರದಿ ಕೊಡುತ್ತಿರಬೇಕು.

ಅಲ್ಲದೆ ಪ್ರಾಣಿಗಳ ಫೋಟೊ, ವಿಡಿಯೋಗಳನ್ನು ಕಳುಹಿಸುತ್ತಿರಬೇಕು. ಪ್ರಾಣಿಗಳ ದತ್ತು ಸ್ವೀಕರಿಸುವವರು ತಮ್ಮ ವಿಳಾಸದ ಪ್ರತಿಯನ್ನು ಎನಿಮಲ್ ಕೇರ್ ಟ್ರಸ್ಟ್‌ಗೆ ನೀಡಬೇಕು.

ಇಂದು ಅನಿಮಲ್ ಕೇರ್ ಟ್ರಸ್ಟ್ 20ಕ್ಕೂ ಅಧಿಕ ನಾಯಿಮರಿಗಳು, 10 ಬೆಕ್ಕಿನ ಮರಿಗಳನ್ನು ದತ್ತು ನೀಡಲು ನಿರ್ಧರಿಸಿದೆ. ಈಗಾಗಲೇ 6 ನಾಯಿಮರಿಗಳು, 4 ಬೆಕ್ಕಿನ ಮರಿಗಳನ್ನು ದತ್ತು ನೀಡಲಾಗಿದೆ. ದತ್ತು ಸ್ವೀಕಾರ ನಡೆಯುವ ಸ್ಥಳದಲ್ಲಿ ಬರುವ ಪ್ರಾಣಿ ಪ್ರಿಯರು ತಮಗೆ ಬೇಕಾದ ಪ್ರಾಣಿಗಳನ್ನು ಆರಿಸಿ ಕೊಂಡೊಯ್ಯುವುದನ್ನು ಕಾಣಬಹುದು.

ABOUT THE AUTHOR

...view details