ಮಂಗಳೂರು :ಇಂದು ದೇಶದೆಲ್ಲೆಡೆ ಅಕ್ಷಯ ತೃತೀಯವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿರುವುದರಿಂದ ಇಂದು ಹಲವು ಮಂದಿ ಬಂಗಾರ ಖರೀದಿಸಿ ಖುಷಿಪಟ್ಟರು.
ಮಂಗಳೂರಿನ ಚಿನ್ನದಂಗಡಿಗಳಲ್ಲಿ ಬಂಗಾರ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು. ಸಣ್ಣಸಣ್ಣ ಚಿನ್ನದಂಗಡಿಗಳು, ಕಾರ್ಪೊರೇಟ್ ಕಂಪನಿಗಳ ಚಿನ್ನದ ಮಳಿಗೆಗಳಲ್ಲಿ ಬಂಗಾರ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿದ್ದರು. ಕೆಲವರು ಎರಡು 3 ದಿನಗಳ ಮೊದಲೇ ಬುಕ್ಕಿಂಗ್ ಮಾಡಿ ಖರೀದಿಸಿದರೆ, ಇನ್ನೂ ಹಲವರು ಅಂಗಡಿಗೇ ಬಂದು ಚಿನ್ನ ಖರೀದಿಸಿದರು.