ಮಂಗಳೂರು: ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಂಗಳೂರಿನ ಯುವಕನೊಬ್ಬ 6,000 ಕಿಲೋಮೀಟರ್ ಸೈಕಲ್ ಪಯಣವನ್ನು ಆರಂಭಿಸಿದ್ದಾನೆ.
ಪರಿಸರ ಜಾಗೃತಿ ಮೂಡಿಸಲು 6 ಸಾವಿರ ಕಿ.ಮೀ. ಸೈಕಲ್ ಪಯಣ ಆರಂಭಿಸಿದ ಯುವಕ
ಪರಿಸರ, ಹಸಿರು ಕ್ರಾಂತಿಯ ಬಗ್ಗೆ ಜನಜಾಗೃತಿ ಮೂಡಿಸಲು ಮಂಗಳೂರಿನ ಯುವಕನೊಬ್ಬ 6,000 ಕಿಲೋಮೀಟರ್ ಸೈಕಲ್ ಪಯಣ ಆರಂಭಿಸಿದ್ದಾನೆ.
ಜೆಸಿಐ ಸದಸ್ಯರಾಗಿರುವ ಶ್ರವಣ್ ಕುಮಾರ್ ಅವರು ಬದಲಾಗುತ್ತಿರುವ ವಾತಾವರಣದ ಕುರಿತು ಮತ್ತು ಹಸಿರು ಕ್ರಾಂತಿಯ ಬಗ್ಗೆ ಜನಜಾಗೃತಿ ಮೂಡಿಸಲು ಸೈಕಲ್ ಪಯಣ ಆರಂಭಿಸಿದ್ದಾರೆ. ಜೆಸಿಐ ಮತ್ತು ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಸೈಕಲ್ ಪಯಣ ಆರಂಭಿಸಿದ್ದು, ಇಂದು ಮಣ್ಣಗುಡ್ಡೆ ರೋಟರಿ ಬಾಲಭವನದಲ್ಲಿ ಎಂ. ರಂಗನಾಥ್ ಹಾಗೂ ಸೌಜನ್ಯ ಹೆಗ್ಡೆ ಅವರು ಸೈಕಲ್ ಯಾತ್ರೆಗೆ ಚಾಲನೆ ನೀಡಿದರು.
ಈ ಸೈಕಲ್ ಪ್ರಯಾಣವು 10 ಮಹಾನಗರಗಳ ಮೂಲಕ ಸಾಗಲಿದ್ದು, ಆಯಾ ನಗರ, ಗ್ರಾಮೀಣ ಭಾಗದಲ್ಲಿರುವ ಜನರಿಗೆ ದೇಸಿ ತಳಿ ಬೆಳೆಸುವುದು, ಸಾವಯವ ಕೃಷಿ, ಮಳೆ ಕೊಯ್ಲು ಮೊದಲಾದವುಗಳ ಬಗ್ಗೆ ಶ್ರವಣ್ ಜಾಗೃತಿ ಮೂಡಿಸಲಿದ್ದಾರೆ. ಒಟ್ಟು 75 ದಿನಗಳ ಕಾಲ ಪಯಣ ಕೈಗೊಂಡಿದ್ದು, ಮುಂಬೈ, ನಾಗ್ಪುರ, ಝಾನ್ಸಿ, ಹರಿದ್ವಾರ, ವಾರಣಾಸಿ ,ಲಖನೌ, ಇಂಪಾಲ ಮೊದಲಾದ ಪ್ರದೇಶಗಳಿಗೆ ತೆರಳಿ ಜಾಗೃತಿ ಮೂಡಿಸಲಿದ್ದಾರೆ.