ಮಂಗಳೂರು: ಶಂಕಿತ ಇಲಿ ಜ್ವರಕ್ಕೆ ಕಡಬ ಮೂಲದ ಯುವಕನೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಶಂಕಿತ ಇಲಿ ಜ್ವರಕ್ಕೆ ಮಂಗಳೂರಲ್ಲಿ ಯುವಕ ಬಲಿ - suspected rat fever
ಶಂಕಿತ ಇಲಿ ಜ್ವರಕ್ಕೆ ಕಡಬ ಮೂಲದ ಯುವಕನೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಹಳೆನೇರಂಕಿ ಗ್ರಾಮದ ಕುಕ್ಕೇಜಾಲು ನಿವಾಸಿ ಕುಂಞಿ ಮುಗೇರ ಎಂಬುವರ ಪುತ್ರ ಅನೀಶ್ ಕೆ. ಮೃತಪಟ್ಟಿರುವ ಯುವಕ. ಅನೀಶ್ ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಸಂಬಂಧ ಪಟ್ಟ ಮಲ್ಲಿಕಟ್ಟೆಯಲ್ಲಿರುವ ಪರಂಪರಾ ಕರಕುಶಲ ವಸ್ತುಗಳ ಮಾರಾಟ ಮಳಿಗೆಯಲ್ಲಿ ಉದ್ಯೋಗಿಯಾಗಿದ್ದರು. ಸೆ.5 ರಂದು ಆತನಿಗೆ ದಿಢೀರ್ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಅನಿಶ್ನನ್ನು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಯುವಕ ಕೊನೆಯುಸಿರೆಳೆದಿದ್ದಾನೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಪ್ರತಿಕ್ರಿಯಿಸಿ, ಅನೀಶ್ ಇಲಿ ಜ್ವರದಿಂದ ಮೃತಪಟ್ಟಿದ್ದಾರೆಂದು ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ. ವರದಿ ಬಂದ ನಂತರವೇ ಈ ಬಗ್ಗೆ ಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.