ಕಲಬುರಗಿ:ಬಾತ್ ರೂಂಗೆ ಹೋಗಿ ಬರುವುದಾಗಿ ಹೇಳಿ ಬೇರೊಬ್ಬರ ಕೈಗೆ ನವಜಾತ ಹೆಣ್ಣು ಶಿಶು ಕೊಟ್ಟು ಮಹಿಳೆ ಪರಾರಿಯಾಗಿರುವ ಘಟನೆ ಜಿಲ್ಲೆಯ ಶಹಾಬಾದ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಬಾತ್ ರೂಂಗೆ ಹೋಗಿ ಬರುವೆ ಎಂದವಳು ನವಜಾತ ಶಿಶು ಬಿಟ್ಟು ಪರಾರಿ! - kannada newspaper
ಬಾತ್ ರೂಂ ಹೋಗಿ ಬರೋದಾಗಿ ಹೇಳಿ ನವಜಾತ ಹೆಣ್ಣು ಶಿಶುವನ್ನು ಪಕ್ಕದಲ್ಲಿ ಕುಳಿತಿದ್ದವರ ಕೈಗೆ ಕೊಟ್ಟು ಮಹಿಳೆ ಪರಾರಿಯಾಗಿರುವ ಘಟನೆ ಶಹಾಬಾದ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಮೂರು ದಿನಗಳ ನವಜಾತ ಹೆಣ್ಣು ಶಿಶುವನ್ನು ಎತ್ತಿಕೊಂಡು ರೈಲು ನಿಲ್ದಾಣದಲ್ಲಿ ಕುಳಿತಿದ್ದ ಮಹಿಳೆವೋರ್ವಳು, ಬಾತ್ ರೂಂಗೆ ಹೋಗಿ ಬರೋದಾಗಿ ಹೇಳಿ ಪಕ್ಕದಲ್ಲಿ ಕುಳಿತಿದ್ದ ಮಹಿಳೆ ಕೈಗೆ ಮಗುವನ್ನು ಕೊಟ್ಟಿದ್ದಳು. ಆದ್ರೆ ಎರಡ್ಮೂರು ಗಂಟೆಯಾದರೂ ಮಗುವಿನ ತಾಯಿ ವಾಪಸ್ ಬಾರದೆ ಇದ್ದಾಗ ಗಾಬರಿಗೊಂಡ ಮಹಿಳೆ ಸ್ಥಳೀಯರಿಗೆ ತಿಳಿಸಿದ್ದರು. ಆಗ ಸಾರ್ವಜನಿಕರು ಚೈಲ್ಡ್ ಲೈನ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಮಾರ್ಗದರ್ಶಿ ಸಂಸ್ಥೆಯ ಚೈಲ್ಡ್ ಲೈನ್ ಸಿಬ್ಬಂದಿ ಮಗುವನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ.
ಬಳಿಕ ಆಂಬ್ಯುಲೆನ್ಸ್ ಮೂಲಕ ಕಲಬುರಗಿ ಜಿಲ್ಲಾಸ್ಪತ್ರೆಗೆ ಮಗು ಕರೆತಂದು ದಾಖಲಿಸಿದ್ದಾರೆ. ಆದ್ರೆ ಮಗುವನ್ನು ಬಿಟ್ಟು ಹೋದ ತಾಯಿ ಎಲ್ಲಿಯವಳು, ಆಕೆ ಯಾರು? ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಶಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.