ಕರ್ನಾಟಕ

karnataka

ETV Bharat / city

ಗೋರಿಗಳ ಮಧ್ಯೆ ಕೇಕ್ ಕತ್ತರಿಸಿ ಹುಟ್ಟುಹಬ್ಬ! ಮೌಢ್ಯತೆ ವಿರುದ್ಧ ಯುವಕರ ಸಮರ - Kalburgi

ವೈಚಾರಿಕ ಮನೋಭಾವನೆವುಳ್ಳ ಇಬ್ಬರು ಯುವಕರು ಸ್ಮಶಾನ ಭೂಮಿಯಲ್ಲಿನ ಗೋರಿಗಳ ಮಧ್ಯೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಸ್ಮಶಾನದ ಮಧ್ಯೆ ಹುಟ್ಟುಹಬ್ಬ ಆಚರಣೆ

By

Published : Jun 7, 2019, 7:26 PM IST

ಕಲಬುರಗಿ: ಹುಟ್ಟುಹಬ್ಬ ಅಂದ್ರೆ ಯುವ ಜನತೆಗೆ ಅದೇನೋ ಒಂಥರಾ ಖುಷಿ! ಸಂಭ್ರಮ!. ಹೊಟೇಲು, ಪಾರ್ಕು​ಗಳಲ್ಲಿ ಕೇಕ್ ಕತ್ತರಿಸಿ ಆಡಂಬರವಾಗಿ ಜನ್ಮದಿನ ಆಚರಿಸುವುದನ್ನು ನಾವು ನೋಡಿದ್ದೇವೆ. ಆದ್ರೆ. ಇಲ್ಲಿ ಇಬ್ಬರು ಯುವಕರು ಸ್ಮಶಾನ ಭೂಮಿಯಲ್ಲಿ ಗೋರಿಗಳ ಮಧ್ಯೆ ಕೇಕ್ ಕತ್ತರಿಸಿ ಹುಟ್ದಬ್ಬ ಸೆಲೆಬ್ರೇಟ್‌ ಮಾಡಿದ್ದಾರೆ.

ಸ್ಮಶಾನದ ಮಧ್ಯೆ ಹುಟ್ಟುಹಬ್ಬ ಆಚರಣೆ

ಹೀಗೆ ವಿನೂತನ ರೀತಿಯಲ್ಲಿ ಜನ್ಮದಿನ ಆಚರಣೆ ಮಾಡಿಕೊಂಡವರು ಶ್ರವಣಕುಮಾರ ಮೋಸಲಗಿ ಹಾಗೂ ರವಿಕುಮಾರ ಪೂಜಾರಿ. ಇಬ್ಬರು ಯುವಕರು ತಮ್ಮ ಹುಟ್ಟುಹಬ್ಬವನ್ನು ವಾಡಿ ಪಟ್ಟಣದ ರುದ್ರಭೂಮಿಯಲ್ಲಿನ ಗೋರಿಗಳ ಮಧ್ಯೆ ತಮ್ಮ ಸ್ನೇಹಿತರೊಂದಿಗೆ ಕೇಕ್ ಕತ್ತರಿಸಿ ಸರಳವಾಗಿ ಆಚರಿಸಿಕೊಂಡರು.ಇದೇ ವೇಳೆ ಸ್ಮಶಾನದ ಒಳಗಡೆ ಸಸಿಗಳನ್ನು ನೆಡುವ ಮೂಲಕ ಪರಿಸರ ಪ್ರೇಮವನ್ನೂ ಮೆರೆದರು. ಈ ಮೂಲಕ ಮೌಢ್ಯತೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಪ್ರಯತ್ನಿಸಿದ್ದಾರೆ‌‌.

ವೈಚಾರಿಕ ಮನೋಭಾವನೆವುಳ್ಳ ಶ್ರವಣಕುಮಾರ ಹಾಗೂ ರವಿಕುಮಾರ ಜನರಲ್ಲಿ ಮೌಢ್ಯತೆ ದೂರ ಮಾಡುವ ನಿಟ್ಟಿನಲ್ಲಿ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.

For All Latest Updates

TAGGED:

Kalburgi

ABOUT THE AUTHOR

...view details