ಕರ್ನಾಟಕ

karnataka

ETV Bharat / city

ಬೈಕ್​ಗಳ ಮೇಲೆ ಸಾರಿಗೆ ಬಸ್​​ ಪಲ್ಟಿ: ಪವಾಡಸದೃಶವಾಗಿ ಪಾರಾದ ಪ್ರಯಾಣಿಕರು - bike and bus accident news

ಕಲಬುರಗಿಯಿಂದ ಸುಮಾರು 20 ಜನ ಪ್ರಯಾಣಿಕರನ್ನು ಹೊತ್ತು ಆಳಂದ ಕಡೆಗೆ ಹೊರಟಿದ್ದ ಬಸ್ ಚಾಲಕ‌ನ ನಿಯಂತ್ರಣ ತಪ್ಪಿ ರಸ್ತೆ ಬದಿ ಬೈಕ್​ ನಿಲ್ಲಿಸಿಕೊಂಡು ನಿಂತವರ​ ಮೇಲೆ ಪಲ್ಟಿಯಾದ ಘಟನೆ ಆಳಂದ ರಸ್ತೆಯ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಬಳಿ ನಡೆದಿದೆ.

ಬೈಕ್​ಗಳ ಮೇಲೆ ಸಾರಿಗೆ ಬಸ್ ಪಲ್ಟಿ

By

Published : Jul 28, 2019, 9:34 PM IST

ಕಲಬುರಗಿ: ರಸ್ತೆ ಬದಿ ಬೈಕ್​ ನಿಲ್ಲಿಸಿಕೊಂಡು ನಿಂತವರ ಮೇಲೆ ಸಾರಿಗೆ ಬಸ್ ಪಲ್ಟಿಯಾದ ಘಟನೆ ಆಳಂದ ರಸ್ತೆಯ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಬಳಿ ನಡೆದಿದೆ.

ಬೈಕ್​ಗಳ ಮೇಲೆ ಸಾರಿಗೆ ಬಸ್ ಪಲ್ಟಿ

ಕಲಬುರಗಿಯಿಂದ ಸುಮಾರು 20 ಜನ ಪ್ರಯಾಣಿಕರನ್ನು ಹೊತ್ತು ಆಳಂದ ಕಡೆಗೆ ಹೊರಟಿದ್ದ ಬಸ್ ಚಾಲಕ‌ನ ನಿಯಂತ್ರಣ ತಪ್ಪಿ ರಸ್ತೆ ಬದಿ ಬೈಕ್​ ನಿಲ್ಲಿಸಿಕೊಂಡು ನಿಂತಿದ್ದವರ​ ಮೇಲೆ ಪಲ್ಟಿಯಾಗಿದೆ.

ಘಟನೆಯಲ್ಲಿ ಓರ್ವ ಬೈಕ್ ಸವಾರನ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅದೃಷ್ಟವಶಾತ್​ ಪವಾಡಸದೃಶ ರೀತಿಯಲ್ಲಿ ಬಸ್​ನಲ್ಲಿದ್ದ ಎಲ್ಲಾ ಪ್ರಯಾಣಿಕರು ಕ್ಷೇಮವಾಗಿ ಹೊರಬಂದಿದ್ದಾರೆ. ಇನ್ನು ಬಸ್ ಪಲ್ಟಿಯಾಗಿದ್ದರಿಂದ ತುರ್ತು ನಿರ್ಗಮನ ಹಾಗೂ ಕಿಟಕಿಯ ಗ್ಲಾಸ್ ಒಡೆದು ಪ್ರಯಾಣಿಕರು ಹೊರಗೆ ಬಂದಿದ್ದಾರೆ.

ಇನ್ನು ಎರಡು ಬೈಕ್​ಗಳು ನುಜ್ಜುಗುಜ್ಜಾಗಿದ್ದು, ಗಾಯಾಳು ಯುವಕನನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details