ಕಲಬುರಗಿ: ಅಕ್ರಮ ಪಿಎಸ್ಐ ನೇಮಕಾತಿ ಪ್ರಕರಣದ ಮತ್ತೊಬ್ಬ ಆರೋಪಿ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಸಿಐಡಿಗೆ ಶರಣಾದರು. ಪಿಎಸ್ಐ ಅಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದಲು ಸಹಕಾರ ನೀಡಿರುವ ಗಂಭೀರ ಆರೋಪ ಎದುರಿಸುತ್ತಿರುವ ಇವರು ಕಳೆದ 21 ದಿನಗಳಿಂದ ಪೊಲೀಸರ ಕೈಗೆ ಸಿಗದೆ ತೆಲೆಮರೆಸಿಕೊಂಡಿದ್ದರು. ಇದೀಗ ಸ್ವತಃ ತಾವೇ ಕಲಬುರಗಿಯ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ.
ಇದನ್ನೂ ಓದಿ:ಪಿಎಸ್ಐ ನೇಮಕಾತಿ ಹಗರಣ: ನೀರಾವರಿ ಇಲಾಖೆಯ ಅಧಿಕಾರಿ ಸಿಐಡಿಗೆ ಶರಣಾಗತಿ
ಸಿಐಡಿ ಚುರುಕಿನ ತನಿಖಾ ಕಾರ್ಯಚರಣೆಯಿಂದ ಆರೋಪಿಗಳ ಎದೆಯಲ್ಲಿ ನಡುಕ ಉಂಟಾಗಿ ತಾವಾಗಿಯೇ ಬಂದು ಶರಣಾಗತಿಯಾಗುತ್ತಿದ್ದಾರೆ ಎನ್ನಲಾಗಿದೆ. ನಿನ್ನೆ(ಭಾನುವಾರ) ಮಂಜುನಾಥ ಮೇಳಕುಂದಿ, ಇಂದು ಕಾಶಿನಾಥ ತಾವಾಗಿಯೇ ಸ್ವತಃ ಸಿಐಡಿಗೆ ಸರೆಂಡರ್ ಆಗಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಮಂಜುನಾಥ ಮೇಳಕುಂದಿ ಸಹೋದರ ರವೀಂದ್ರ ಮೇಳಕುಂದಿ ಹಾಗೂ ಶಾಂತಿಭಾಯಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಸಿಐಡಿಯಿಂದ ದಿವ್ಯಾ ಹಾಗರಗಿ ತೀವ್ರ ವಿಚಾರಣೆ: ಅಕ್ರಮದಲ್ಲಿ ಪ್ರಭಾವಿಗಳ ಹೆಸರು ತಳುಕು?