ಸೇಡಂ:ಕೊರೊನಾ ರೋಗದ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ನೀಡುವವರನ್ನು ಎಚ್ಚರಿಸುವ ಉದ್ದೇಶದಿಂದ ಸೋಮವಾರ ಪಟ್ಟಣದಲ್ಲಿ ಪೊಲೀಸರು ಪರೇಡ್ ನಡೆಸಿದರು.
ಕೊರೊನಾ ಕುರಿತು ಜನ ಜಾಗೃತಿಗಾಗಿ ಪೊಲೀಸ್ ಪರೇಡ್ - ಕೊರೊನಾ ಕುರಿತು ಜನ ಜಾಗೃತಿಗಾಗಿ ಪೊಲೀಸ್ ಪೆರೇಡ್
ಮನೆಯಿಂದ ಯಾರೂ ಹೊರ ಬರದಂತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜಾಲತಾಣದಲ್ಲಿ ಕೊರೊನಾ ವೈರಸ್ ಕುರಿತು ತಪ್ಪು ಸಂದೇಶ ರವಾನಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅರಿವು ಮೂಡಿಸಿದರು.
ಕೊರೊನಾ ಕುರಿತು ಜನ ಜಾಗೃತಿಗಾಗಿ ಪೊಲೀಸ್ ಪೆರೇಡ್
ಪೊಲೀಸ್ ನಿಲ್ದಾಣದಿಂದ ಡಿಎಸ್ಪಿ ವೀರಭದ್ರಯ್ಯ ನೇತೃತ್ವದಲ್ಲಿ ಸಿಪಿಐ ರಾಜಶೇಖರ್ ಹಳಗೋದಿ, ಪಿಐ ಆನಂದರಾವ್, ಪಿಎಸ್ಐ ಸುಶಿಲಕುಮಾರ್, ಶಿವಶಂಕರ ಸಾಹು, ವಿದ್ಯಾಶ್ರೀ ಸೇರಿದಂತೆ ಸಿಬ್ಬಂದಿ ಪೊಲೀಸ್ ರೈಲು ನಿಲ್ದಾಣ, ಮುಖ್ಯರಸ್ತೆ, ದೊಡ್ಡ ಅಗಸಿ, ಸಣ್ಣ ಅಗಸಿ, ನೂಲಾಗಲ್ಲಿ, ಟೇಕ್ ಏರಿಯಾ, ಮಾರುಕಟ್ಟೆ, ಚೌರಸ್ತಾ ಮಾರ್ಗಗಳಲ್ಲಿ ಪಥ ಸಂಚಲನ ನಡೆಸಿದರು.