ಕಲಬುರಗಿ :ರಾಜ್ಯದಲ್ಲಿ ಕೊರೊನಾ 3 ನೇ ಅಲೆ ಶುರುವಾಗಿದೆ. ಅದರ ಭೀಕರತೆ ತಡೆಗೆ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ವೀಕೆಂಡ್, ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶಿಸಿದೆ. ಆದರೆ, ಶನಿವಾರ-ಭಾನುವಾರ ಕೆಲವೆಡೆಗಳಲ್ಲಿ ಸಂತೆ ನಡೆಯುವ ಕಾರಣ ಕರ್ಫ್ಯೂಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಈ ಮಧ್ಯೆ ಕಲಬುರಗಿಯ ಫಿಲ್ಟರ್ ಬೆಡ್ ಪ್ರದೇಶದಲ್ಲಿ ಶನಿವಾರ ನಡೆಯುವ ಸಂತೆಯಲ್ಲಿ ಕುರಿ ಮಾರಾಟ, ಖರೀದಿಗೆ ಬಂದವರು ಮಾಸ್ಕ್, ಸಾಮಾಜಿಕ ಅಂತರವನ್ನು ಪಾಲಿಸದೇ ಎಲ್ಲ ಕೊರೊನಾ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆ.
ಇದಲ್ಲದೇ, ಸರ್ಕಾರದ ನಿರ್ಬಂಧಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಜನರು, ಮೂರು ತಿಂಗಳಿಗೊಮ್ಮೆ ಲಾಕ್ಡೌನ್, ಕರ್ಫ್ಯೂ ಹಾಕುತ್ತಿದ್ದರೆ, ನಾವೆಲ್ಲಾ ಬದುಕಬೇಕಾ? ಸಾಯಬೇಕಾ? ಎಂದು ಪ್ರಶ್ನಿಸಿದ್ದಾರೆ.