ಕರ್ನಾಟಕ

karnataka

ETV Bharat / city

ಈಶಾನ್ಯ ವಲಯ ಪದವೀಧರ ಚುನಾವಣೆ, ಮತ ನೋಂದಣಿಗೆ ಆಸಕ್ತಿ ತೋರದ ಬೋಧಕ ವರ್ಗ? - ಶಿಕ್ಷಕರ ಮತಕ್ಷೇತ್ರದ ಚುನಾವಣೆ ಇದೇ ತಿಂಗಳ 28ಕ್ಕೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಬೋಧಕ ವರ್ಗದವರಿದ್ದಾರೆ. ಸದ್ಯ ಅದರಲ್ಲಿ ಕೇವಲ 25 ಸಾವಿರ ಬೋಧಕರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ..

northeast-graduate-election-faculty-not-interested-in-vote-registration-story
ಈಶಾನ್ಯ ವಲಯ ಪದವೀಧರ ಚುನಾವಣೆ, ಮತ ನೋಂದಣಿಗೆ ಆಸಕ್ತಿ ತೋರದ ಬೋಧಕ ವರ್ಗ..?

By

Published : Oct 4, 2020, 7:20 PM IST

ಕಲಬುರಗಿ :ಈಶಾನ್ಯ ವಲಯ ಪದವೀಧರ ಕ್ಷೇತ್ರಕ್ಕೆ ಇದೇ ತಿಂಗಳು ಚುನಾವಣೆ ನಡೆಯಲಿದೆ. ಕಲಬುರಗಿ ವಿಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದರ ಜೊತೆಗೆ ಮತದಾರರ ‌ಪಟ್ಟಿ ಗೊಂದಲದ ಅಪಸ್ವರವು ಕೇಳಿ ಬರುತ್ತಿದೆ.

ಈಶಾನ್ಯ ವಲಯ ಪದವೀಧರ ಚುನಾವಣೆ, ಮತ ನೋಂದಣಿಗೆ ಆಸಕ್ತಿ ತೋರದ ಬೋಧಕ ವರ್ಗ?

ಕಲ್ಯಾಣ ಕರ್ನಾಟಕ ಒಳಗೊಂಡಂತೆ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಇದೇ ತಿಂಗಳ 28ಕ್ಕೆ ನಿಗದಿಯಾಗಿದೆ. ಮೂರು ಪಕ್ಷದ ಅಭ್ಯರ್ಥಿಗಳು ಗೆಲುವಿಗೆ ಕಸರತ್ತು ನಡೆಸಿದ್ದಾರೆ.‌ ಆದರೆ, ಅಭ್ಯರ್ಥಿಗಳಲ್ಲಿ ಇರುವ ಉತ್ಸಾಹ ಮತದಾರರಿಗೆ ಇಲ್ಲ. ಇದಕ್ಕೆ ಕಾರಣ ಮತದಾರರ ಪಟ್ಟಿಯ ಲೋಪದೋಷ.

ಇದರಿಂದ ನಿರಾಸಕ್ತರಾದ ಬೋಧಕ ವರ್ಗ ಈ ಬಾರಿ ನೋಂದಣಿಗೆ ಆಸಕ್ತಿ ತೋರಿಸಿಲ್ಲ ಎಂಬ ಮಾತು ಕೇಳಿ ಬರುತ್ತಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಬೋಧಕ ವರ್ಗದವರಿದ್ದಾರೆ. ಸದ್ಯ ಅದರಲ್ಲಿ ಕೇವಲ 25 ಸಾವಿರ ಬೋಧಕರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸರ್ವರ್ ಸಮಸ್ಯೆ :ಆಯೋಗ ನೋಂದಣಿಗೆ ಅವಕಾಶ ಕಲ್ಪಿಸಿದೆ. ಆದರೆ, ಅರ್ಹತೆ ಹೊಂದಿರುವ ಶಿಕ್ಷಕರು ನೋಂದಣಿ ಮಾಡಿಸಿಕೊಳ್ಳಲು ಹೋದಾಗ ಸರ್ವರ್‌ ಬ್ಯುಸಿ ಎಂದು ತೊರಿಸುತ್ತಿದೆ ಎಂಬುದು ಶಿಕ್ಷಕರ ಆರೋಪ‌ ಇದರಿಂದಾಗಿ ಬೇಸರಗೊಂಡ ಅರ್ಹ ಶಿಕ್ಷಕರು, ನೋಂದಣಿಯ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಇದು ಕೂಡ ಮತದಾರರ ಸಂಖ್ಯೆ ಕಡಿಮೆಯಾಗಲು ಕಾರಣ ಎನ್ನಬಹುದು.

ಮತದಾರರ ಪಟ್ಟಿಯಲ್ಲಿರುವ ಲೋಪದೋಷ :ಪ್ರೌಢ ಶಾಲೆ ಹಾಗೂ ಉನ್ನತ ಶಿಕ್ಷಣದಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕರಿಗೆ ಮತದಾರರಾಗಲು ಅರ್ಹತೆ ಇದೆ. ಅದನ್ನು ಸರಿಪಡಿಸದೆ ಗೊಂದಲದಿಂದ ಕೋಡಿರುವ ಮತದಾರರ ಪಟ್ಟಿ ಇಟ್ಟುಕೊಂಡು ಚುನಾವಣೆ ಘೋಷಣೆ ಮಾಡಿರುವುದು ಬೋಧಕ ವರ್ಗದ ಆಕ್ರೋಶಕ್ಕೆ ಕಾರಣವಾಗಿದೆ.

ABOUT THE AUTHOR

...view details