ಸೇಡಂ :ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ 15 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದ 15 ಮಂದಿ ಬಂಧನ.. - Mass prayer in the mosque'
ಖಚಿತ ಮಾಹಿತಿ ಮೇರೆಗೆ ಸಿಪಿಐ ರಾಜಶೇಖರ ಹಳಗೋದಿ ಮತ್ತು ಪಿಎಸ್ಐ ಸುಶೀಲ್ಕುಮಾರ್ ಅವರು ದಾಳಿ ನಡೆಸಿ ಸಾಮೂಹಿಕ ಪ್ರಾರ್ಥನೆ ಮಾಡ್ತಿದ್ದವರನ್ನ ಬಂಧಿಸಿದರು.
ಸೇಡಂ ಪೊಲೀಸ್ ಠಾಣೆ
ಲಾಕ್ಡೌನ್ ವೇಳೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಆದರೂ ನಿಯಮಗಳನ್ನು ಉಲ್ಲಂಘಿಸಿ ಸೇಡಂನ ಟಿ.ಬೊಮ್ನಳ್ಳಿ ಗ್ರಾಮದ ಮಸೀದಿಯಲ್ಲಿ ಮಂಗಳವಾರ ಸಂಜೆ 15 ಜನ ನಮಾಜ್ ಮಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಸಿಪಿಐ ರಾಜಶೇಖರ ಹಳಗೋದಿ ಮತ್ತು ಪಿಎಸ್ಐ ಸುಶೀಲ್ಕುಮಾರ್ ಅವರು ದಾಳಿ ನಡೆಸಿ ಸಾಮೂಹಿಕ ಪ್ರಾರ್ಥನೆ ಮಾಡ್ತಿದ್ದವರನ್ನ ಬಂಧಿಸಿದರು.