ಕಲಬುರಗಿ: ಕೆಲಸಕ್ಕೆ ಹಾಜರಾಗಲು ಹೊರಟ ನರ್ಸ್ ಬೈಕ್ ಅಪಘಾತವಾಗಿ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಘಟನೆ ಚಿತ್ತಾಪುರ ತಾಲೂಕಿನ ರಾವೂರ್ ಕ್ರಾಸ್ ಬಳಿ ನಡೆದಿದೆ.
ಕಲಬುರಗಿಯಲ್ಲಿ ಬೈಕ್ ಅಪಘಾತ: ಕೆಲಸಕ್ಕೆ ಹೊರಟ ನರ್ಸ್ಗೆ ಗಾಯ..! - ಬೈಕ್ ಅಪಘಾತ ಕೆಲಸಕ್ಕೆ ಹೊರಟ ನರ್ಸ್ ಗೆ ಗಾಯ
ಕೆಲಸಕ್ಕೆ ಹಾಜರಾಗಲು ಹೊರಟ ನರ್ಸ್ ಒಬ್ಬರ ಬೈಕ್ ಅಪಘಾತಕ್ಕೀಡಾಗಿ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಘಟನೆ ಚಿತ್ತಾಪುರ ತಾಲೂಕಿನ ರಾವೂರ್ ಕ್ರಾಸ್ ಬಳಿ ನಡೆದಿದೆ.
ರಾಜಕುಮಾರಿ ರಾಜಾಪೂರ (28) ಎಂಬ ನರ್ಸ್ ತೆಲೆಗೆ ತೀವ್ರಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೈಕ್ ಚಲಾಯಿಸುತ್ತಿದ್ದ ರೇಣುಕಾ ಎಂಬ ನರ್ಸ್ಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ರಾಜಕುಮಾರಿ ಹಾಗೂ ರೇಣುಕಾ ಕಲಬುರಗಿಯಿಂದ ಚಿತ್ತಾಪುರ ಸರ್ಕಾರಿ ಆಸ್ಪತ್ರೆಗೆ ಬೈಕ್ ಮೇಲೆ ತೆರಳುವಾಗ ಅಪಘಾತ ಸಂಭವಿಸಿದೆ.
ಅಪರಿಚಿತ ವಾಹನ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ. ರೇಣುಕಾ ಸ್ಟಾಫ್ ನರ್ಸ್ ಆಗಿದ್ರೆ ರಾಜಕುಮಾರಿ ಇತ್ತೀಚೆಗಷ್ಟೇ ಗುತ್ತಿಗೆ ಆಧಾರದ ಮೇಲೆ ನರ್ಸ್ ಆಗಿ ನೇಮಕಗೊಂಡಿದ್ದರು.