ಕರ್ನಾಟಕ

karnataka

ETV Bharat / city

ಪ್ರಿಯಾಂಕ್ ಒಬ್ಬನೇ ಎಲ್ಲದಕ್ಕೂ ಹೊಣೆಯಾಗಲು ಹೇಗೆ ಸಾಧ್ಯ... ಖರ್ಗೆ ಪ್ರಶ್ನೆ

ಪಕ್ಷದ ಮುಖಂಡರು ಒತ್ತಾಯಿಸಿ ಪ್ರಿಯಾಂಕ್​ನನ್ನು ಚುನಾವಣಾ ರಾಜಕೀಯಕ್ಕೆ ತಂದ್ರು. ಈಗ ನನ್ನ ಮಗನ ವಿರುದ್ಧ ಮಾತನಾಡುತ್ತಿದ್ದಾರೆ. ಇಂತಹ ಹೊಟ್ಟೆಕಿಚ್ಚಿನ ಮಾತುಗಳಿಗೆ ಯಾರೂ ಏನೂ ಮಾಡಲಾಗಲ್ಲ ಎಂದು ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

mallikarjun-kharge

By

Published : Mar 10, 2019, 2:48 PM IST

ಕಲಬುರಗಿ: ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಪುತ್ರ, ಸಚಿವ ಪ್ರಿಯಾಂಕ್​ ಖರ್ಗೆ ವಿರುದ್ಧ ಮಾತನಾಡುವವರ ವಿರುದ್ಧ ರಂ ಆಗಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಒಬ್ಬನೇ ಎಲ್ಲದಕ್ಕೂ ಹೊಣೆಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಬೇಕಾದ್ರೆ ಪ್ರಿಯಾಂಕ್​ನನ್ನು ಬಿಡಿಸಿ ಬಾಕಿ 30 ಜನರನ್ನು ಸಚಿವರನ್ನಾಗಿಸಲಿ ಎಂದರು.

ನಾನು ಲೋಕಸಭೆಗೆ ತೆರಳಿದಾಗ ಪಕ್ಷದ ಮುಖಂಡರು ಒತ್ತಾಯಿಸಿ ಪ್ರಿಯಾಂಕ್​ನನ್ನು ಚುನಾವಣಾ ರಾಜಕೀಯಕ್ಕೆ ತಂದ್ರು. ಈಗ ನನ್ನ ಮಗನ ವಿರುದ್ಧವೇ ಮಾತನಾಡುತ್ತಿದ್ದಾರೆ. ಇಂತಹ ಹೊಟ್ಟೆಕಿಚ್ಚಿನ ಮಾತುಗಳಿಗೆ ಯಾರೂ ಏನೂ ಮಾಡಲಾಗಲ್ಲ ಎಂದು ಹೇಳಿದರು.

ರೇವಣ್ಣ ಹೇಳಿಕೆಗೆ ಅಸಮಾಧಾನ

ಇದೇ ವೇಳೆ ನಟಿ ಸುಮಲತಾ ಬಗ್ಗೆ ಸಚಿವ ಹೆಚ್​ ಡಿ ರೇವಣ್ಣ ಹೇಳಿಕೆಗೆ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರೇವಣ್ಣ ಓರ್ವ ಸೀನಿಯರ್ ಲೀಡರ್. ಅವರು ಆತುರವಾಗಿ ಮಾತನಾಡುವುದು ಸರಿಯಲ್ಲ. ಎಲ್ಲರ ಭಾವನೆಗಳನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ. ಉದ್ವೇಗಕ್ಕೆ ಅವಕಾಶ ಕೊಡದೆ ಸಂಯಮದಿಂದ ಮಾತನಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.

ವಿರೋಧಿಗಳು ಇಂಥದ್ದನ್ನೇ ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ. ಹಾಗಾಗಿ ರೇವಣ್ಣನವರು ತಾಳ್ಮೆ-ಸಂಯಮದಿಂದ ಮಾತನಾಡಬೇಕು ಎಂದು ಸಚಿವ ಹೆಚ್ ಡಿ ರೇವಣ್ಣಗೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

ABOUT THE AUTHOR

...view details