ಕರ್ನಾಟಕ

karnataka

ETV Bharat / city

ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ.. ಬಿಜೆಪಿಯ 7 ಎಂಎಲ್​ಸಿಗಳಿಗೆ ಹೈಕೋರ್ಟ್​ ನೋಟಿಸ್​ - High court issued notice to seven bjp mlc

ಕಲಬುರಗಿ ಮಹಾನಗರ ಪಾಲಿಕೆ ಅಧ್ಯಕ್ಷ ಚುನಾವಣೆಯ(Kalburgi Mayur election)ಮತದಾರರ ಪಟ್ಟಿಯಲ್ಲಿ ಕಾನೂನುಬಾಹಿರವಾಗಿ ಬಿಜೆಪಿ ಎಂಎಲ್​ಸಿಗಳ ಹೆಸರು ಸೇರ್ಪಡೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವಿವರಣೆ ನೀಡಲು ಬಿಜೆಪಿಯ 7 ಮೇಲ್ಮನೆ ಸದಸ್ಯರಿಗೆ (Seven BJP MLC)ಹೈಕೋರ್ಟ್​ ನೋಟಿಸ್​(High Court Issued Notice)ಜಾರಿ ಮಾಡಿದೆ.

high court ssued notice
ಎಂಎಲ್​ಸಿಗಳಿಗೆ ಹೈಕೋರ್ಟ್​ ನೋಟಿಸ್​

By

Published : Nov 18, 2021, 11:43 AM IST

ಕಲಬುರಗಿ:ಕಲಬುರಗಿ ಮಹಾನಗರ ಪಾಲಿಕೆ ಅಧ್ಯಕ್ಷ ಚುನಾವಣೆಯ(Kalburgi Mayor election) ಮತದಾರರ ಪಟ್ಟಿಯಲ್ಲಿ ಕಾನೂನುಬಾಹಿರವಾಗಿ ಬಿಜೆಪಿ ಎಂಎಲ್​ಸಿಗಳ ಹೆಸರು ಸೇರ್ಪಡೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿವರಣೆ ನೀಡಲು ಬಿಜೆಪಿಯ 7 ಮೇಲ್ಮನೆ ಸದಸ್ಯರಿಗೆ (Seven BJP MLC)ಹೈಕೋರ್ಟ್​ ನೋಟಿಸ್​ ಜಾರಿ(High Court Issued Notice) ಮಾಡಿದೆ.

ಇಡೀ ರಾಜ್ಯದ ಗಮನ ಸೆಳೆದಿದ್ದ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನ ಪಡೆಯಲು ಮತದಾರರ ಪಟ್ಟಿಯಲ್ಲಿ ಬಿಜೆಪಿ ಕಾನೂನು ಬಾಹಿರವಾಗಿ ತನ್ನ 7 ಮೇಲ್ಮನೆ ಸದಸ್ಯರ ಹೆಸರನ್ನು ಸೇರ್ಪಡೆ ಮಾಡುವ ಯತ್ನ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್​ ನಾಯಕರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ರಿಟ್​ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ.ಐ ಅರುಣ್, ಬಿಜೆಪಿಯ ಲೇಹರ್‌ಸಿಂಗ್, ಲಕ್ಷ್ಮಣ ಸವದಿ, ಸಾಯಿಬಣ್ಣ ತಳವಾರ್, ರಘುನಾಥ್ ಮಲ್ಕಾಪುರೆ ಸೇರಿದಂತೆ 7 ಜನರಿಗೆ ಈ ಕುರಿತು ವಿವರಣೆ ನೀಡುವಂತೆ ನೋಟಿಸ್​ ಜಾರಿ ಮಾಡಿದ್ದಾರೆ. ಅಲ್ಲದೇ, ಅರ್ಜಿಯ ವಿಚಾರಣೆಯನ್ನು ಇದೇ ತಿಂಗಳು 29ಕ್ಕೆ ಮುಂದೂಡಿದ್ದಾರೆ.

ಇದನ್ನೂ ಓದಿ: ವಿವಾದಗಳ ಸುರಿಮಳೆ: ಕಂಗನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಕೋರಿ ದೂರು

ಈ ಮಧ್ಯೆ ಪಾಲಿಕೆಯ ಅಧ್ಯಕ್ಷ ಸ್ಥಾನಕ್ಕೆ ಇದೇ 20ರಂದು ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ್ದರಿಂದ ಮೇಯರ್ ಚುನಾವಣೆ ಮುಂದೂಡಿ ಪ್ರಾದೇಶಿಕ ಆಯುಕ್ತ ಎನ್.ವಿ.ಪ್ರಸಾದ್ ಆದೇಶ ಹೊರಡಿಸಿದ್ದರು.

ABOUT THE AUTHOR

...view details