ಕರ್ನಾಟಕ

karnataka

ETV Bharat / city

ಖಾಸಗಿ ಶಾಲೆಯನ್ನೇ ನಾಚಿಸುತ್ತದೆ ಈ ನೈಸರ್ಗಿಕ ಪರಿಸರ ಶಾಲೆ! - Eco friendly school

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು 2017-18 ಮತ್ತು 2018-19ರಲ್ಲಿ ಸತತ ಎರಡು ಬಾರಿ ಹಸಿರು ಶಾಲೆ ಪ್ರಶಸ್ತಿಗೆ ಉಡಚಾಣಹಟ್ಟಿ ಗ್ರಾಮದ ಸರ್ಕಾರಿ ಶಾಲೆ ಭಾಜನವಾಗಿದೆ.

eco friendly school in Kalburgi district
ಉಡಚಾಣಹಟ್ಟಿ ಗ್ರಾಮದ ಸರ್ಕಾರಿ ಶಾಲೆ

By

Published : Feb 12, 2021, 11:49 AM IST

ಕಲಬುರಗಿ:ಶಾಲೆಯೊಳಗೆ ಪ್ರವೇಶಿಸಿದರೆ ಸ್ವಾಗತ ಕೋರುವ ಹಚ್ಚ ಹಸಿರು. ತರಹೇವಾರಿ ಸಸಿಗಳ ದರ್ಶನ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಎಂತಹವರೂ ವ್ಹಾವ್​ ಎನ್ನುವ ವಾತಾವರಣ. ಈ ದೃಶ್ಯಗಳು ಕಂಡುಬಂದಿದ್ದು ಅಫಜಲಪುರ ತಾಲೂಕಿನ ಉಡಚಾಣಹಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ. ಶಿಕ್ಷಕರು ಮನಸ್ಸು ಮಾಡಿದರೆ ಇಡೀ ಶಾಲೆಯ ವಾತಾವರಣವನ್ನೇ ಬದಲಾಯಿಸಬಲ್ಲರು ಎಂಬ ಮಾತಿಗೆ ನಿದರ್ಶನ ಈ ಶಾಲೆ.

ಉದ್ಯಾನವನ್ನಾಗಿ ಪರಿವರ್ತಿಸಿದ ಶಿಕ್ಷಕರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಂದಾಜು ಎರಡು ಎಕರೆಯ ಶಾಲೆಯ ಆವರಣದ ತುಂಬೆಲ್ಲ ಮಾವು - ಬೇವು, ತೆಂಗು, ದಾಳಿಂಬೆ, ಪೇರಲ, ಹೊಂಗೆ, ನೆಲ್ಲಿಕಾಯಿ, ಗುಲಾಬಿ ಸೇರಿ ವಿವಿಧ ಬಗೆಯ ಹೂ-ಹಣ್ಣು, ಔಷಧೀಯ ಸಸ್ಯಗಳಿವೆ. ಗ್ರಾಮಸ್ಥರ ಸಹಾಯದ ಮೇರೆಗೆ ಶಿಕ್ಷಕರು ಈ ಮಟ್ಟಿಗೆ ಶಾಲೆಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ. ವಾತಾವರಣದಷ್ಟೇ ಶಿಕ್ಷಣವೂ ಉತ್ತಮವಾಗಿದೆ.

ಉಡಚಾಣಹಟ್ಟಿ ಗ್ರಾಮದ ಸರ್ಕಾರಿ ಶಾಲೆ

9 ಶಿಕ್ಷಕರಿರುವ ಈ ಶಾಲೆಯಲ್ಲಿ 337 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಫ್ಯಾನ್‌ಗಳು, ತಟ್ಟೆಗಳು, ಸರಸ್ವತಿ ವಿಗ್ರಹ ಸೇರಿ ಅನೇಕ ವಸ್ತುಗಳನ್ನು ಗ್ರಾಮಸ್ಥರು ಶಾಲೆಗೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಗ್ರಾಮಸ್ಥರ ಸಹಕಾರದೊಂದಿಗೆ ಮುಖ್ಯ ಶಿಕ್ಷಕ ಹೈದರ ಚೌದರಿ ಹಾಗೂ ಸಹ ಶಿಕ್ಷಕರು ಹಟ್ಟಿ ಶಾಲೆಯನ್ನು ತಾಲೂಕಿಗೆ ಮಾದರಿಯಾಗುವಂತೆ ರೂಪಿಸಿದ್ದಾರೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು 2017-18 ಮತ್ತು 2018-19ರಲ್ಲಿ ಸತತ ಎರಡು ಬಾರಿ ಹಸಿರು ಶಾಲೆ ಪ್ರಶಸ್ತಿ ನೀಡಿ ಗೌರವಿಸಿದೆ‌.ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು 2017-18 ಮತ್ತು 2018-19ರಲ್ಲಿ ಸತತ ಎರಡು ಬಾರಿ ಹಸಿರು ಶಾಲೆ ಪ್ರಶಸ್ತಿ ನೀಡಿ ಗೌರವಿಸಿದೆ‌.

ಮಕ್ಕಳನ್ನು ಸೆಳೆಯಲು ತರಗತಿ ಕೋಣೆಗಳ ಹೊರ ಭಾಗದಲ್ಲಿ ರೈಲು ಬೋಗಿಗಳ ಮಾದರಿಯಲ್ಲಿ ಬಣ್ಣ ಹಚ್ಚಲಾಗಿದೆ. ಇದಕ್ಕೆ ಉಡಚಾಣ -ಹಟ್ಟಿ ಎಕ್ಸ್‌ಪ್ರೆಸ್‌ ಹಾಗೂ ಪರಿಸರ ಸ್ನೇಹಿ ಎಕ್ಸ್‌ಪ್ರೆಸ್‌ ಎಂದು ಹೆಸರಿಡಲಾಗಿದೆ. ಸರ್ಕಾರಿ ಶಾಲೆಗಳು ಅಂದರೆ ಹೇಳೋರು ಕೇಳೋರು ಯಾರು ಇರಲ್ಲ ಎಂಬ ಮಾತುಗಳನ್ನೂ ಕೇಳಿದ್ದೇವೆ. ಆದರೆ, ಉಡಚಾಣಹಟ್ಟಿ ಶಾಲೆ ಅದಕ್ಕೆ ತದ್ವಿರುದ್ಧ. ಈ ಶಾಲೆಯ ವಾತಾವರಣದಂತೆ ರಾಜ್ಯದ ಸರ್ಕಾರಿ ಶಾಲೆಗಳು ರೂಪುಗೊಂಡರೆ, ಮಕ್ಕಳು ಖಾಸಗಿ ಶಾಲೆಯಿಂದ ಹೊರಬರುವ ಸಾಧ್ಯತೆ ಇದೆ.

ABOUT THE AUTHOR

...view details