ಕರ್ನಾಟಕ

karnataka

ETV Bharat / city

ವಿಚಿತ್ರ ಖಾಯಿಲೆಯಿಂದ ಜೀವಂತ ನರಕ ಅನುಭವಿಸುತ್ತಿರೋ ಬಾಲಕ

ಹುಬ್ಬಳ್ಳಿಯ ಆನಂದ ನಗರದ ಯುವಕನೊಬ್ಬ ವಿಚಿತ್ರ ಚರ್ಮ ಖಾಯಿಲೆಯಿಂದ ಬಳಲುದ್ದಾನೆ. ಇರ್ಫಾನ್ ಮನಿಯಾರ (22) ಎಂಬಾತನೇ ವಿಚಿತ್ರವಾದ ಚರ್ಮರೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಕನಾಗಿದ್ದಾನೆ. ‌

young man
ಇರ್ಫಾನ್ ಮನಿಯಾರ

By

Published : Apr 9, 2020, 2:11 PM IST

ಹುಬ್ಬಳ್ಳಿ : ವಿಚಿತ್ರ ಖಾಯಿಲೆಯಿಂದ ಯುವಕನೊಬ್ಬ ಜೀವಂತ ಕೊಳೆಯುತ್ತಿರುವ ಘಟನೆ ಹಳೆ ಹುಬ್ಬಳ್ಳಿಯ ಆನಂದ ನಗರದಲ್ಲಿ ಬೆಳಕಿಗೆ ಬಂದಿದೆ.

ಇರ್ಫಾನ್ ಮನಿಯಾರ (22) ಎಂಬಾತನೇ ವಿಚಿತ್ರವಾದ ಚರ್ಮರೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಕನಾಗಿದ್ದಾನೆ. ‌ಕಳೆದ ಎರಡು ತಿಂಗಳ ಹಿಂದೆ ಕುತ್ತಿಗೆಯ ಭಾಗಕ್ಕೆ ಮೊಡವೆಗಳು ಕಾಣಿಸಿಕೊಂಡಿದ್ದವು. ಆದ್ರೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಗುಣಮುಖವಾಗದ ಕಾರಣ ಮನೆಯಲ್ಲೇ ಉಳಿದುಕೊಂಡಿದ್ದ.

ಖಾಯಿಲೆಯಿಂದ ಬಳಲುತ್ತಿರುವ ಬಾಲಕ

ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಿವೆ. ಹೀಗಾಗಿ ಕೈ ಚೆಲ್ಲಿ ಕುಳಿತ ಕುಟುಂಬದ ಸಹಾಯಕ್ಕೆ ಬಂದ ಅಂಗನವಾಡಿ ಶಿಕ್ಷಕಿ ಹಾಗೂ ಕಾಂಗ್ರೆಸ್ ಮುಖಂಡ ಇಮ್ರಾನ್ ಎಲಿಗಾರ ಬಂದಿದ್ದು, ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇರುವ ಒಬ್ಬನೇ ಮಗನಿಗೆ ವಿಚಿತ್ರವಾದ ಚರ್ಮರೋಗ ಕಾಣಿಸಿಕೊಂಡಿದ್ದು, ಇಡೀ ಕುಟುಂಬ ಆತಂಕದಲ್ಲಿ‌ ಕಾಲ ಕಳೆಯುವಂತಾಗಿದೆ.

ABOUT THE AUTHOR

...view details