ಕರ್ನಾಟಕ

karnataka

ETV Bharat / city

ಧಾರವಾಡದ ಮನೆಗಳಿಗೆ ಟಾರ್ಪಲ್​ಗಳೇ ರಕ್ಷಾ ಕವಚ, ತಾಡಪತ್ರಿ ಬೆಲೆಯಲ್ಲಿ ದಿಢೀರ್​ ಏರಿಕೆ - rain news

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನರು ಹೈರಾಣಾಗಿದ್ದು, ಮಳೆಗೆ ಮನೆಗಳು ನಿರಂತರವಾಗಿ ಸೋರುತ್ತಿವೆ. ಇದರಿಂದ ಮನೆಗಳ ರಕ್ಷಣೆಗೆ ಜನರು ತಾಡಪತ್ರಿ ಹಾಗೂ ಪ್ಲಾಸ್ಟಿಕ್ ಕವರ್​ಗಳ ಮೊರೆ ಹೋಗುತ್ತಿದ್ದಾರೆ.

ತಾಡಪತ್ರಿಗಳ ಮೋರೆ ಹೋದ ಹುಬ್ಬಳ್ಳಿ ಮಂದಿ

By

Published : Aug 10, 2019, 3:20 AM IST

ಹುಬ್ಬಳ್ಳಿ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನರು ಹೈರಾಣಾಗಿದ್ದು, ಮಳೆಗೆ ಮನೆಗಳು ನಿರಂತರವಾಗಿ ಸೋರುತ್ತಿವೆ. ಇದರಿಂದ ಮನೆಗಳ ರಕ್ಷಣೆಗೆ ಜನರು ತಾಡಪತ್ರಿ (ಟಾರ್ಪಲ್​) ಹಾಗೂ ಪ್ಲಾಸ್ಟಿಕ್​ ಕವರ್​ಗಳ ಮೊರೆ ಹೋಗುತ್ತಿದ್ದಾರೆ.

ತಾಡಪತ್ರಿಗಳ ಮೋರೆ ಹೋದ ಹುಬ್ಬಳ್ಳಿ ಮಂದಿ

ಧಾರವಾಡ ಜಿಲ್ಲೆಯಾದ್ಯಂತ ಸುರಿದ ಸತತ ಮಳೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳು ಸೋರುತ್ತಿದ್ದು, ಇದರಿಂದ ಮನೆಗಳ ರಕ್ಷಣೆಗಾಗಿ ತಾಡಪತ್ರಿ, ಪ್ಲಾಸ್ಟಿಕ್ ಹಾಳೆಗಳನ್ನು ಮನೆಯ ಮೇಲ್ಚಾವಣಿ, ಗೋಡೆಗಳು ಸೇರಿದಂತೆ ಮನೆಯ ಒಳಗಡೆ ಸೋರುವಲ್ಲಿ ಹೊದಿಸಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಟಾರ್ಪಲ್​ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಕೂಡಾ ಹೆಚ್ಚಾಗಿದೆ.

ಅಷ್ಟೇ ಅಲ್ಲದೇ ನಗರಕ್ಕೆ ಟಾರ್ಪಲ್​ಗಳು ಹೊರ ರಾಜ್ಯಗಳಿಂದ ಪೂರೈಕೆ ಆಗುತ್ತಿದ್ದು, ಇದೀಗ ನಿರಂತರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಗಳು ಬಹುತೇಕ ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ಸರಬರಾಜು ಆಗುತ್ತಿದ್ದ ತಾಡಪತ್ರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅಂಗಡಿಗಳಲ್ಲಿ ತಾಡಪತ್ರಿಗಳ ಸಂಗ್ರಹ ಕಡಿಮೆ ಆಗಿದ್ದು, ಈ ಹಿನ್ನೆಲೆ ಮೊದಲು 1000, 1500 ಇದ್ದ ತಾಡಪತ್ರೆಗಳಿಗೆ ಇದೀಗ 3000 ರೂ.ಗಳಿಗೆ ಒಂದರಂತೆ ಮಾರಾಟವಾಗುತ್ತಿವೆ. ಆದ್ದರಿಂದ ಅಷ್ಟೊಂದು ದುಡ್ಡು ಕೊಟ್ಟು ತೆಗೆದುಕೊಳ್ಳಲು ಸಾಧ್ಯಾವಾದೇ ಹೋದ್ರು ಸಹ ಸಾಲ ಮಾಡಿ ಕೊಂಡು ಕೊಳ್ಳುತ್ತಿದ್ದೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details