ಕರ್ನಾಟಕ

karnataka

ETV Bharat / city

ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ಸ್ಥಿತಿ ದಯನೀಯವಾಗಿದೆ: ಜಗದೀಶ್​ ಶೆಟ್ಟರ್ ​ - Siddaramaiah

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಪರಿಸ್ಥಿತಿ ದಯನೀಯವಾಗಿದ್ದು, ಅವರು ಮೊದಲು ಬಿಜೆಪಿ ಹೈಕಮಾಂಡ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್​ ಟಾಂಗ್​ ನೀಡಿದ್ದಾರೆ​.

ಶೆಟ್ಟರ್ ಟಾಂಗ್​

By

Published : Sep 16, 2019, 4:39 PM IST

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಪರಿಸ್ಥಿತಿ ಏನೆಂದು ಅವರೇ ಹೇಳಲಿ. ಬಿಜೆಪಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಕಾಂಗ್ರೆಸ್ ಹೈಕಮಾಂಡ್ ವೀಕ್ ಇದೆ. ಐದು ವರ್ಷ ಸಿಎಂ ಆಗಿದ್ದವರು ಈಗ ಪ್ರತಿಪಕ್ಷ ನಾಯಕನಾಗಲು ಲಾಬಿ ಮಾಡುತ್ತಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

‌ನಗರದಲ್ಲಿಂದು ಸ್ಮಾರ್ಟ್​ ಸಿಟಿ ಯೋಜನೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಪರಿಸ್ಥಿತಿ ದಯನೀಯವಾಗಿದೆ. ಸಿದ್ದರಾಮಯ್ಯ ಬಿಜೆಪಿ ಹೈಕಮಾಂಡ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ. ಅವರ ಪಕ್ಷದ ಪರಿಸ್ಥಿತಿ ಬಗ್ಗೆ ನೋಡಿಕೊಳ್ಳಲಿ. ರಾಜ್ಯದಲ್ಲಿ ನೆರೆ ಪರಿಹಾರ ಕಾರ್ಯಕ್ಕೆ ಯಾವುದೇ ಹಣಕಾಸಿನ ತೊಂದರೆಯಾಗಿಲ್ಲ. ಕೇಂದ್ರದಿಂದಲೂ ಸದ್ಯದಲ್ಲಿ ಪರಿಹಾರ ಬಿಡುಗಡೆಯಾಗಲಿದೆ ಎಂದರು.

ಜಗದೀಶ್​ ಶೆಟ್ಟರ್, ಸಚಿವ

ಮಹದಾಯಿ ಬಗ್ಗೆ ಕಾಂಗ್ರೆಸ್ ನಿಲುವು ಏನೆಂದು ಸ್ಪಷ್ಟಪಡಿಸಲಿ. ಸಿದ್ದರಾಮಯ್ಯಗೆ ಗೋವಾ ಕಾಂಗ್ರೆಸ್ ಜೊತೆ ಮಾತಾಡಲು ಹೇಳಿದ್ರೆ ಮಾತನಾಡಿಲ್ಲ. ಗೋವಾ ಕಾಂಗ್ರೆಸ್ ಮಹದಾಯಿ ವಿಚಾರದಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತಿದೆ‌. ಹೀಗಾಗಿ ಗೋವಾ ಸಿಎಂ ಪ್ರಮೋದ್ ಸಾವಂತ‌ ಮಾತುಕತೆಗೆ ಹಿಂಜರಿಯುತ್ತಿದ್ದಾರೆ. ದೇಶದಲ್ಲಿ ವಿವಾದಗಳು ಹಾಗೇ ಇರಬೇಕು. ಅದರ‌ ರಾಜಕೀಯ ಲಾಭ ಪಡೆಯಬೇಕು ಎನ್ನುವುದು ಕಾಂಗ್ರೆಸ್ ನಿಲುವು. ಎಲ್ಲ ವಿಷಯಗಳಲ್ಲೂ ಕಾಂಗ್ರೆಸ್ ಇದನ್ನೇ ಮಾಡುತ್ತಾ ಬಂದಿದೆ. ಮಹದಾಯಿ ವಿಚಾರದಲ್ಲಿ ಪರಿಹಾರ ಹುಡುಕುವ ಪ್ರಾಮಾಣಿಕ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮಾಡಿಲ್ಲ ಎಂದು ಆರೋಪಿಸಿದರು.

ABOUT THE AUTHOR

...view details