ಧಾರವಾಡ: ಬಾಡ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಚಾಲಕನ ಬದಲಾವಣೆಯೇ ಕಾರಣವಾಯ್ತಾ? ಎಂಬ ಪ್ರಶ್ನೆ ಮೂಡಿದೆ. ಕ್ರೂಸರ್‌ಗೆ ಮೊದಲಿದ್ದ ಚಾಲಕ ಬೇರೆ, ಬಳಿಕ ಬಂದವನೇ ಬೇರೆ ಎಂಬ ಮಾಹಿತಿ ಲಭ್ಯವಾಗಿದೆ. ವಧುವಿನ ಕಡೆಯವರನ್ನು ಕರೆದುಕೊಂಡು ಬಂದಿದ್ದ ಕ್ರೂಸರ್ ಇದಾಗಿದ್ದು, ಅದೇ ಕ್ರೂಸರ್‌ನಲ್ಲಿ ಜನರು ನಿಗದಿ ಗ್ರಾಮಕ್ಕೆ ಹೊರಟಿದ್ದರು. ನಿಶ್ಚಿತಾರ್ಥ ಕಾರ್ಯದ ಬಳಿಕ ನಿಗದಿಗೆ ಹೊರಟಿಟಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಧಾರವಾಡ ರಸ್ತೆ ಅಪಘಾತ ಪ್ರಕರಣ: ಚಾಲಕನ ಬದಲಾವಣೆಯೇ ಘಟನೆಗೆ ಕಾರಣವಾಯ್ತಾ? - ಧಾರವಾಡ ರಸ್ತೆ ಅಪಘಾತ ಪ್ರಕರಣ
ಧಾರವಾಡ ಬಳಿ ನಡೆದ ಭೀಕರ ಅಪಘಾತಕ್ಕೆ ಚಾಲಕನ ಬದಲಾವಣೆಯೇ ಕಾರಣವಾಯ್ತಾ? ಎಂಬ ಪ್ರಶ್ನೆ ಮೂಡಿದೆ. ಚಾಲಕ ಬದಲಾಗಿದ್ದನ್ನು ವಧುವಿನ ಕಡೆಯವರು ಗಮನಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಧಾರವಾಡ ಬಳಿ ಭೀಕರ ಅಪಘಾತ
ಮನ್ಸೂರ ಕಲ್ಯಾಣ ಮಂಟಪಕ್ಕೆ ಮದುವೆ ಸ್ಥಳಾಂತರವಾಗಿತ್ತು. ನಿಗದಿಯ ಮಂಜುನಾಥ ಜತೆ ಸವದತ್ತಿಯ ರೂಪಾ ಎಂಬುವವರ ಮದುವೆ ನಡೆಯಬೇಕಿತ್ತು. ಬೆಳಗ್ಗೆ ನಿಗದಿಯಲ್ಲಿ ಮತ್ತೊಂದು ದೇವರ ಕಾರ್ಯ ನಡೆಯಬೇಕಿತ್ತು. ಅದಕ್ಕಾಗಿ ನಿಗದಿಗೆ ಮಧ್ಯರಾತ್ರಿಯೇ ಸಂಬಂಧಿಗಳು ತೆರಳುತ್ತಿದ್ದರು. ಈ ವೇಳೆ ಚಾಲಕ ಬದಲಾಗಿದ್ದರು ಎನ್ನಲಾಗ್ತಿದೆ. ಚಾಲಕ ಬದಲಾಗಿದ್ದನ್ನು ವಧುವಿನ ಕಡೆಯವರು ಗಮನಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಧಾರವಾಡ ಬಳಿ ಭೀಕರ ಅಪಘಾತ: ಮೂವರು ಮಕ್ಕಳು ಸೇರಿ ಏಳು ಜನ ಸ್ಥಳದಲ್ಲೇ ದುರ್ಮರಣ