ಹುಬ್ಬಳ್ಳಿ :ವಿವಾದಿತ ಪೋಸ್ಟ್ನಿಂದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಸಂಬಂಧಿಗಳು ಇಂದು ಇಲ್ಲಿನ ಕೋರ್ಟ್ ಆವರಣದಲ್ಲಿ ಮಾತನಾಡಿ, ತಮ್ಮವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕಣ್ಣೀರು ಸುರಿಸಿದರು.
ಹುಬ್ಬಳ್ಳಿ ಗಲಭೆ : ಬಂಧಿತರ ಬಿಡುಗಡೆಗೆ ಸಂಬಂಧಿಕರ ಒತ್ತಾಯ - ಬಂಧಿತರು ನಿರಾಪರಾಧಿಗಳೆಂದು ಕೋರ್ಟ್ ಎದುರು ಸಂಬಂಧಿಗಳ ಗೋಳಾಟ
ಕಲ್ಲು ತೂರಾಟ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಸಂಬಂಧಿಕರು ತಮ್ಮವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಆವರಣದಲ್ಲಿ ಒತ್ತಾಯಿಸಿದರು..
ಬಂಧಿತರು ನಿರಾಪರಾಧಿಗಳೆಂದು ಕೋರ್ಟ್ ಎದುರು ಸಂಬಂಧಿಗಳ ಗೋಳಾಟ.
'ನಮ್ಮ ಮಗ ತಪ್ಪು ಮಾಡಿಲ್ಲ. ಅವನನ್ನು ಸುಮ್ಮನೆ ಕರೆದುಕೊಂಡು ಹೋಗಿದ್ದಾರೆ. ನಮ್ಮ ಮಗನನ್ನು ಬಿಟ್ಟು ಬಿಡಿ ಎಂದು ಕೈ ಮುಗಿದು ಕೇಳುತ್ತೇವೆ. ಪೊಲೀಸರು ಮತ್ತೊಮ್ಮೆ ಪರಿಶೀಲನೆ ಮಾಡಲಿ. ನಮ್ಮವರು ತಪ್ಪು ಮಾಡಿದ್ರೆ ಶಿಕ್ಷೆ ಕೊಡಲಿ. ಆದರೆ, ಮನೆಯಲ್ಲಿದ್ದವರನ್ನು ಕರೆದುಕೊಂಡು ಹೋಗಿದ್ದಾರೆ. ಇದರಿಂದ ಮನೆ ನಿರ್ವಹಣೆ ಕಷ್ಟವಾಗಿದೆ' ಎಂದು ಹೇಳಿದರು. ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.