ಕರ್ನಾಟಕ

karnataka

ETV Bharat / city

ಚುನಾವಣಾಧಿಕಾರಿಗಳ ದಾಳಿ: 14 ಲಕ್ಷ ಮೌಲ್ಯದ ಗ್ಯಾಸ್​​​ ಸ್ಟವ್​ಗಳು ವಶಕ್ಕೆ - ಗ್ಯಾಸ್‌ ಸ್ಟವ್​

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಚುನಾವಣಾಧಿಕಾರಿಗಳು 14 ಲಕ್ಷ ಬೆಲೆಬಾಳುವ 297 ಸ್ಟವ್​ಗಳನ್ನು ವಶಕ್ಕೆ ಪಡೆದಿದ್ದು, ಮತದಾರರಿಗೆ ಹಂಚಲು ಶೇಖರಣೆ ಮಾಡಿದ್ದ ಗ್ಯಾಸ್ ಸ್ಟವ್‌ಗಳು ಎನ್ನಲಾಗಿದೆ.

14 ಲಕ್ಷ ಮೌಲ್ಯದ ಗ್ಯಾಸ್‌ ಸ್ಟವ್​ಗಳು

By

Published : Mar 21, 2019, 1:21 PM IST

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಚುನಾವಣಾಧಿಕಾರಿಗಳು ನಗರದ ಗೋದಾಮಿನಲ್ಲಿ ಶೇಖರಣೆ ಮಾಡಿಟ್ಟ ಗ್ಯಾಸ್‌ ಸ್ಟವ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಖಚಿತ ‌ಮಾಹಿತಿ ಮೇಲೆ ದಾಳಿ ನಡೆಸಿದ ಫ್ಲೈಯಿಂಗ್​ ಸ್ಕ್ವಾಡ್ ಕುಮ್ಮಣ್ಣವರ್, ವಿಕಾಸ ನಗರದ ಗೋದಾಮಿನಲ್ಲಿ ಸಂಗ್ರಹಿಸಿದ್ದ 14 ಲಕ್ಷ ಬೆಲೆಬಾಳುವ 297 ಸ್ಟವ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಇವುಗಳು ಮತದಾರರಿಗೆ ಹಂಚಲು ಶೇಖರಣೆ ಮಾಡಿದ್ದ ಗ್ಯಾಸ್ ಸ್ಟವ್‌ಗಳು ಎನ್ನಲಾಗಿದ್ದು, ಈ ಸಂಬಂಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 ಲಕ್ಷ ಮೌಲ್ಯದ ಗ್ಯಾಸ್‌ ಸ್ಟವ್​ಗಳು

ABOUT THE AUTHOR

...view details