ಕರ್ನಾಟಕ

karnataka

ETV Bharat / city

ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ: ಪ್ರಲ್ಹಾದ್​ ಜೋಶಿ - ಬೀದರ ಶಾಹೀನ್ ಶಾಲೆ ನಾಟಕ ಕುರಿತು ಪ್ರಲ್ಹಾದ್ ಜೋಶಿ ಹೇಳಿಕೆ

ಮೂವರು ವಿದ್ಯಾರ್ಥಿಗಳ ವಿರುದ್ಧ ಕಠಿಣ‌ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

pralhad-joshi-reaction-on-bidar-shaeen-school-drama
ಪ್ರಲ್ಹಾದ್​ ಜೋಶಿ

By

Published : Feb 15, 2020, 5:21 PM IST

ಹುಬ್ಬಳ್ಳಿ:ಪಾಕಿಸ್ತಾನ ಪರ ಘೋಷಣೆ ಕೂಗಿದಹುಬ್ಬಳ್ಳಿಯ ಕೆಎಲ್‌ಇ ಇಂಜನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳ ವಿರುದ್ಧ ಕಠಿಣ‌ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದಲ್ಲಿಂದು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಕೈಯಲ್ಲಿ ದೇಶದ ಪ್ರಧಾನಿ, ರಾಷ್ಟ್ರಪತಿಗಳಿಗೆ ಬಾಯಿಗೆ ಬಂದ ಹಾಗೆ ಮಾತನಾಡಿಸಿದ್ದು, ಕಾಂಗ್ರೆಸ್ ಪಕ್ಷದ ನಮ್ರತೆಯನ್ನು ತೋರುತ್ತದೆ. ಮಕ್ಕಳ ಬಾಯಲ್ಲಿ ಸುಳ್ಳು ಹೇಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಶಾಹಿನ್ ಸ್ಕೂಲ್ ನಾಟಕ ಪ್ರಕರಣ ಕುರಿತು ಪ್ರಲ್ಹಾದ್ ಜೋಶಿ ಹೇಳಿಕೆ

ಕಾಂಗ್ರೆಸ್ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡಲಿ ತಪ್ಪೇನಿಲ್ಲ. ಆದ್ರೆ ಇಂತಹ ದೇಶದ್ರೋಹದ ಕೆಲಸ ಮಾಡುವುದಕ್ಕೆ ಪ್ರೋತ್ಸಾಹ ನೀಡುವ ಕೈ ನಾಯಕರು ಮಕ್ಕಳಿಗೆ ಏನು ಹೇಳಲು ಹೊರಟಿದ್ದಾರೆ? ಮಕ್ಕಳ ಕೈಯಲ್ಲಿ ಪ್ರಧಾನಿ, ರಾಷ್ಟ್ರಪತಿಗಳ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿಸಿದ್ದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ, ಅಂತವರನ್ನು ಬೆಂಬಲಿಸುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿಚಾರವೇನಿದೆ‌? ಎಂದು ಕಿಡಿಕಾರಿದರು.

ಬಡ ಕುಟುಂಬದಿಂದ ಬಂದಿರುವ ನರೇಂದ್ರ ಮೋದಿ ಪ್ರಧಾನಿಯಾಗಿದ್ದು ಕಾಂಗ್ರೆಸ್‌ಗೆ ಸಹಿಸಲು ಆಗುತ್ತಿಲ್ಲ. ಕಾಂಗ್ರೆಸ್‌ನವರು ನಕಲಿ ಗಾಂಧಿ ಕುಟುಂಬದ ಚೇಲಾಗಳು‌. ಅವರಿಗೆ ಕುಟುಂಬದಿಂದ ಬಂದವರೇ ಪ್ರಧಾನಿ ಸ್ಥಾನದಲ್ಲಿ ಕುಳಿತುಕೊಳ್ಳಬೇಕು ಎಂದು ಹರಿಹಾಯ್ದರು.

ABOUT THE AUTHOR

...view details