ಕರ್ನಾಟಕ

karnataka

ETV Bharat / city

ರಸ್ತೆ ಬದಿ ಪಿಪಿಇ ಕಿಟ್ ಎಸೆದ ಸಿಬ್ಬಂದಿ: ಜನರಲ್ಲಿ ಆತಂಕ

ಹುಬ್ಬಳ್ಳಿ ನಗರದ ನೃಪತುಂಗ ಬೆಟ್ಟದ ರಸ್ತೆಯಲ್ಲಿ ಕೊರೊನಾ ವಾರಿಯರ್ಸ್​ ಬಳಸುವ ಪಿಪಿಇ ಕಿಟ್​​ಗಳನ್ನು ಬಳಸಿದ ನಂತರ ರಸ್ತೆ ಬದಿಯೇ ಬೇಕಾಬಿಟ್ಟಿ ಎಸೆದು ಹೋಗಿದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ppe kit disposal in road side
ರಸ್ತೆ ಬದಿ ಪಿಪಿಇ ಕಿಟ್ ಎಸೆದ ಸಿಬ್ಬಂದಿ

By

Published : Jun 29, 2020, 12:01 PM IST

ಹುಬ್ಬಳ್ಳಿ:ನಗರದ ನೃಪತುಂಗ ಬೆಟ್ಟದ ರಸ್ತೆಯಲ್ಲಿ ಕೊರೊನಾ ವೈದ್ಯಕೀಯ ಸಿಬ್ಬಂದಿ ಬಳಸುವ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ಪತ್ತೆಯಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ರಸ್ತೆ ಬದಿ ಪಿಪಿಇ ಕಿಟ್ ಎಸೆದ ಸಿಬ್ಬಂದಿ
ಕೊರೊನಾ ಸೋಂಕಿತರನ್ನು ಚಿಕಿತ್ಸೆಗೆ ಒಳಪಡಿಸುವಾಗ ಈ ವಿಶೇಷ ಪಿಪಿಇ ಕಿಟ್ ಧರಿಸಲಾಗುತ್ತದೆ. ಉಪಯೋಗಿಸಿದ ಬಳಿಕ ಕಿಟ್‍ ಅನ್ನು ಅತ್ಯಂತ ಎಚ್ಚರಿಕೆಯಿಂದ ವಿಲೇವಾರಿ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನವಿದೆ. ವೈರಾಣುಗಳ ಸಂಪರ್ಕಕ್ಕೆ ಬರುವ ಈ ಕಿಟ್‍ಗಳನ್ನು ಎಲ್ಲೆಂದರಲ್ಲಿ ಎಸೆದರೆ ರೋಗ ಹರಡುವ ಸಾಧ್ಯತೆ ಇದೆ. ಹೀಗಾಗಿ ಸ್ಥಳೀಯರು ಹಾಗೂ ವಾಕಿಂಗ್​ ಮಾಡುವ ಜನರು, ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.

ABOUT THE AUTHOR

...view details