ಧಾರವಾಡ:ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೊಸ ಶಕ್ತಿಯೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದೆ ಒಳ್ಳೆಯ ದಿನಗಳು ಬರಲಿವೆ. ನಾನಂತೂ ಯಾವುದೇ ಅಪೇಕ್ಷೆ ಇಟ್ಟುಕೊಂಡಿಲ್ಲ. ನಾನು ಹೇಳಿದ್ದು ಒಮ್ಮೊಮ್ಮೆ ನಿಜವಾಗುತ್ತದೆ. ನಾನೇನು ರಾಜಕೀಯ ಜ್ಯೋತಿಷಿ ಅಲ್ಲ ಎಂದರು.
ಯತ್ನಾಳರಿಗೆ ಸಿಎಂ ಸ್ಥಾನದ ಬಗ್ಗೆ ಸ್ವಾಮೀಜಿಗಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ಮಂತ್ರಿ ಆಗಿದ್ದಾಗ ಕ್ರಿಯಾಶೀಲ ಸಚಿವ ಎಂಬ ಹೆಗ್ಗಳಿಕೆಯನ್ನು ನೀಡಿ ವಾಜಪೇಯಿ ಅವರೇ ಪತ್ರ ಬರೆದಿದ್ದರು. ಆದರೀಗ ದುರ್ದೈವವಶಾತ್ ಯಾವುದೇ ಸ್ಥಾನಮಾನ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.