ಹುಬ್ಬಳ್ಳಿ: ಪ್ರೌಢ ಶಾಲಾ ವಿದ್ಯಾರ್ಥಿಗೆ ಪುಂಡ ಯುವಕರ ಗುಂಪೊಂದು ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಗೊಪ್ಪನಕೊಪ್ಪದಲ್ಲಿ ನಡೆದಿದೆ.
ಕಂಚಿಕೇರಿ ಓಣಿಯ 9 ನೇ ತರಗತಿ ವಿದ್ಯಾರ್ಥಿ ಅಭಿಷೇಕ ಕೆರೂರು ಗಾಯಗೊಂಡ ಬಾಲಕ. ತೀವ್ರವಾಗಿ ಗಾಯಗೊಂಡ ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗೊಪ್ಪನಕೊಪ್ಪದ ಸರ್ಕಾರಿ ಪ್ರೌಢಶಾಲೆಯ ಬಳಿ ನಿಂತಿದ್ದ ಬಾಲಕನಿಗೆ ಏಕಾಏಕಿ ಯುವಕರ ಗುಂಪು ಚಾಕುವಿನಿಂದ ಹಲ್ಲೆ ನಡೆಸಿದೆ. ಯಾಕೆ ಗುರಾಯಿಸುತ್ತೀಯಾ ಎಂದು ಬಾಲಕನ ಮೇಲೆ ದಾಳಿ ಮಾಡಿದ ಯುವಕರ ಗುಂಪು ಚಾಕುವಿನಿಂದ ಇರಿದು ಪರಾರಿಯಾಗಿದೆ.
ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.