ಕರ್ನಾಟಕ

karnataka

ETV Bharat / city

ಆಯಾ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ನೀಡಬೇಕಿತ್ತು: ಜಗದೀಶ್ ಶೆಟ್ಟರ್ ಅಸಮಾಧಾನ - jagadish shettar slams to siddaramaiah in hubli

ಬಿಜೆಪಿಯ ಕೆಲ ಶಾಸಕರು ನನ್ನ ಸಂರ್ಪಕದಲ್ಲಿದ್ದಾರೆ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಜಗದೀಶ್ ಶೆಟ್ಟರ್, ಸುಮ್ನೆ ಹುಳ ಬಿಡುವ ಕೆಲಸವನ್ನು ಸಿದ್ದರಾಮಯ್ಯ ಮಾಡ್ತಿದ್ದಾರೆ. ಅದು ನಿಜವಾಗಿದ್ದರೆ ಹೆಸರು ಬಹಿರಂಗ ಪಡಿಸಲಿ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಹೊರಟಿರುವವರು ಮುರ್ಖರು. ಬಿಜೆಪಿಯನ್ನ ಅಲುಗಾಡಿಸೋಕೆ ಯಾರಿದಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

By

Published : Jan 27, 2022, 7:40 AM IST

ಹುಬ್ಬಳ್ಳಿ: ಆಯಾ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ನೀಡಬೇಕಿತ್ತು. ಇದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದು ಹೇಳುವ ಮೂಲಕ ಮಾಜಿ‌ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜಿಲ್ಲಾ ಉಸ್ತುವಾರಿ ನೇಮಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ನನ್ನ ಪ್ರಕಾರ ಇದು ಇನ್​ಕನ್ವಿನೆಂಟ್ ಆಗುತ್ತದೆ. ಆಡಳಿತ, ಅಭಿವೃದ್ಧಿ ದೃಷ್ಟಿಯಿಂದ ಆಯಾ ಜಿಲ್ಲೆಯವರಿಗೆ ನೀಡಿದ್ರೆ ಒಳ್ಳೆಯದಾಗುತ್ತಿತ್ತು. ನಾನು ಈಗಾಗಲೇ ಸಿಎಂ ಗಮನಕ್ಕೂ ತಂದಿದ್ದೇನೆ. ಮುಂದೆ ನೋಡೋಣ, ಇದು ಯಾವ ರೀತಿ ಪರಿಣಾಮ ಬೀರುತ್ತದೆ ಎಂದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್

ಬಿಜೆಪಿಯ ಕೆಲ ಶಾಸಕರು ನನ್ನ ಸಂರ್ಪಕದಲ್ಲಿದ್ದಾರೆ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸುಮ್ನೆ ಹುಳ ಬಿಡುವ ಕೆಲಸವನ್ನು ಸಿದ್ದರಾಮಯ್ಯ ಮಾಡ್ತಿದ್ದಾರೆ. ಅದು ನಿಜವಾಗಿದ್ದರೆ ಹೆಸರು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಕದ್ದು ಮುಚ್ಚಿ ಮಾಡುವ ಅವಶ್ಯಕತೆಯಿಲ್ಲ. ಈ ರೀತಿ ಹೇಳಿ ಬಿಜೆಪಿ ಬಗ್ಗೆ ನೆಗಿಟಿವಿಟಿ ಕ್ರಿಯೇಟ್ ಮಾಡ್ತಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಹೊರಟಿರುವವರು ಮುರ್ಖರು. ಕಾಂಗ್ರೆಸ್ ಅನ್ನ ದೇಶದಲ್ಲಿ ದುರ್ಬಿನ್ ಹಾಕಿಕೊಂಡು ಹುಡುಕಬೇಕಿದೆ. ಬಿಜೆಪಿಯನ್ನ ಅಲುಗಾಡಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದರು.

ಆರು ತಿಂಗಳಲ್ಲಿ ನಗರದ ಎಲ್ಲ ಬಡಾವಣೆಗಳ ಒಳರಸ್ತೆ ಅಭಿವೃದ್ಧಿ: ಹುಬ್ಬಳ್ಳಿಯ ಬೀಳಗಿ ಲೇಔಟ್‌ನಲ್ಲಿ 27 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸುವ ರಸ್ತೆ ಇಕ್ಕೆಲಗಳಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿಗೆ ಚಾಲನೆ ನೀಡಿ, ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈಗಾಗಲೇ ಗುಜರಾತ್ ಭವನ, ವಿಜಯನಗರ, ವಿಶ್ವೇಶ್ವರಯ್ಯ ನಗರದ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಬದಲಾಯಿಸಲಾಗಿದೆ ಎಂದರು.

ಈಗಾಗಲೇ ಗದಗ, ಕಾರವಾರ, ಬಿಡ್ನಾಳಗಳ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ಕಾಮಗಾರಿ ಮುಗಿದಿದೆ. ಹುಬ್ಬಳ್ಳಿ- ಧಾರವಾಡ ನಡುವಿನ ಬೈಪಾಸ್ ಅನ್ನು 6 ಪಥದಲ್ಲಿ ನಿರ್ಮಿಸಲಾಗುವುದು ಎಂದು ಜಗದೀಶ್​ ಶೆಟ್ಟರ್​​ ತಿಳಿಸಿದರು.

ರಾಜ್ಯದಲ್ಲಿ ಬಿಆರ್ ಟಿಎಸ್ ಬಸ್ ಸಂಚಾರ ಅವಳಿ ನಗರದಲ್ಲಿ ಮಾತ್ರ ಇದೆ. ಟ್ರಾಫಿಕ್ ಸಮಸ್ಯೆ ನಿವಾರಣೆ ಮಾಡಲು ಫ್ಲೈಓವರ್ ನಿರ್ಮಿಸಲಾಗುತ್ತಿದೆ. ದಿನದ 24 ಗಂಟೆ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ವೀರಣ್ಣ ಸವಡಿ, ಸಂತೋಷ ಚವ್ಹಾಣ್, ಮುಖಂಡರಾದ ವಸಂತ ನಾಡಜೋಶಿ, ಸುಧಾಕರ್ ಕಟ್ಟಿಮನಿ ಸೇರಿದಂತೆ ಮತ್ತಿತರರು ಇದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details