ಹುಬ್ಬಳ್ಳಿ:ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳು ಯಾರ ಮನೆಗೆ ಹೋದರೂ ಟಿಕೆಟ್ ಸಿಗುವುದಿಲ್ಲ. ಅದನ್ನು ಕೋರ್ ಕಮಿಟಿಯೇ ನಿರ್ಧಾರ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿಕೆಟ್ ಪಡೆಯಲು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ದಂಡು ನಾಯಕರ ಮನೆ ಬಾಗಿಲಿಗೆ ಬರುತ್ತಿದೆ. ಆದರೆ ಯಾರ ಮನೆ ಬಾಗಿಲಿಗೆ ಹೋದರೂ ಟಿಕೆಟ್ ಸಿಗುವುದಿಲ್ಲ. ಅದು ಯಾರ ಕೈಯಲ್ಲೂ ಇಲ್ಲ. ಟಿಕೆಟ್ ಹಂಚಿಕೆ ಕೋರ್ ಕಮಿಟಿಗೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದರು.