ಹುಬ್ಬಳ್ಳಿ:ಕೊರೊನಾ ವಾರಿಯರ್ಗೆ ಏರಿಯಾದ ಜನರು ನಿತ್ಯ ಮಾನಸಿಕ ಕಿರುಕುಳ ಮಾಡುತ್ತಿರುವ ಅಮಾನವೀಯ ಘಟನೆ ನಗರದ ಮಿಷನ್ ಕಾಂಪೌಂಡ್ ಏರಿಯಾದಲ್ಲಿ ನಡೆದಿದೆ.
Exclusive: ಸಲಾಂ ಹೇಳಬೇಕಿದ್ದ ಜನರಿಂದಲೇ ಕೊರೊನಾ ವಾರಿಯರ್ಗೆ ಅವಮಾನ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್ನಲ್ಲಿ ಕೆಲಸ ಮಾಡಿ ಕಳೆದ ವಾರವಷ್ಟೇ ಕರ್ತವ್ಯದಿಂದ ಮನೆಗೆ ಮರಳಿದ್ದ ಕೊರೊನಾ ವಾರಿಯರ್ಗೆ ಏರಿಯಾದ ಜನರು ನಿತ್ಯ ಮಾನಸಿಕ ಕಿರುಕುಳ ಮಾಡುತ್ತಿರುವ ಅಮಾನವೀಯ ಘಟನೆ ನಗರದ ಮಿಷನ್ ಕಾಂಪೌಂಡ್ ನಡೆದಿದೆ.
ಗಂಗಾ ರಿಗನ್ ಬಳ್ಳಾರಿ ಜನರಿಂದ ಮಾನಸಿಕ ಕಿರುಕುಳಕ್ಕೊಳಗಾಗುತ್ತಿರುವ ನರ್ಸ್. ಇವರು ಕಳೆದ ಕೆಲ ತಿಂಗಳಿನಿಂದ ಕಿಮ್ಸ್ ಆಸ್ಪತ್ರೆ ಕೊರೊನಾ ವಾರ್ಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವಾರವಷ್ಟೇ ಕರ್ತವ್ಯದಿಂದ ಮನೆಗೆ ಮರಳಿದ್ದಾರೆ. ಆದರೆ, ಜೀವ ಪಣಕ್ಕಿಟ್ಟು ಕೆಲಸ ಮಾಡಿದ ಗಂಗಾಗೆ ಬಡಾವಣೆ ಜನರು ಕೊರೊನಾ ಬಂದಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿದ್ದಾರೆ.
ಇವರ ಜೊತೆ ಕೆಲಸ ಮಾಡಿದ ನರ್ಸ್ಗೆ ಮೊನ್ನೆಯಷ್ಟೇ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಇವರಿಗೂ ಕೊರೊನಾ ಬಂದಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿ, ಅಸ್ಪೃಶ್ಯರಂತೆ ನೋಡುತ್ತಿದ್ದಾರೆ. ಹೀಗಾಗಿ 2 ವರ್ಷದ ಮಗುವಿದ್ದರೂ ಕೆಲಸ ಮಾಡಿದ್ದ ಗಂಗಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.