ಹುಬ್ಬಳ್ಳಿ : ಆನ್‌ಲೈನ್‌ನಲ್ಲಿ 22 ಸಾವಿರ ರೂ. ಪಡೆದಿದ್ದ ಮಹಿಳೆಯ ದಾಖಲೆಗಳನ್ನು ಬಳಸಿಕೊಂಡು ವಿವಿಧ ಆ್ಯಪ್‌ಗಳ ಮೂಲಕ ಅವರ ಹೆಸರಲ್ಲಿ 1,78,425 ರೂ. ಸಾಲ ಪಡೆದು ವಂಚಿಸಿದ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಖಲೆ ಬಳಸಿ ಹಣ ವಂಚನೆ : ಆನ್‌ಲೈನ್‌ನಲ್ಲಿ ಸಾಲ ಪಡೆಯುವ ಮುನ್ನ ಎಚ್ಚರ! - instant loan app cheating
ಹಳೇ ಹುಬ್ಬಳ್ಳಿಯ ಪ್ರೀತಿ ಎಂಬುವರು ನ.21 ರಿಂದ ಡಿ. 5ರ ನಡುವೆ ಆ್ಯಪ್ ಒಂದರ ಮೂಲಕ 22,000 ರೂ . ಸಾಲ ಪಡೆದಿದ್ದರು..
ದಾಖಲೆ ಬಳಸಿ ಹಣ ವಂಚನೆ
ಆನ್ಲೈನ್ ಲೋನ್ ಆ್ಯಪ್ ವಂಚನೆ : ಹಳೇ ಹುಬ್ಬಳ್ಳಿಯ ಪ್ರೀತಿ ಎಂಬುವರು ನ.21 ರಿಂದ ಡಿ. 5ರ ನಡುವೆ ಆ್ಯಪ್ ಒಂದರ ಮೂಲಕ 22,000 ರೂ . ಸಾಲ ಪಡೆದಿದ್ದರು.
ಈ ವೇಳೆ ನೀಡಿದ್ದ ಆಧಾರ್, ಪಾನ್ ಕಾರ್ಡ್, ಮತ್ತಿತರ ದಾಖಲೆ ಬಳಸಿಕೊಂಡು ಯಾರೋ ವಿವಿಧ ಆ್ಯಪ್‌ಗಳ ಮೂಲಕ 1.78 ಲಕ್ಷ ರೂ . ಸಾಲ ಪಡೆದಿದ್ದಾರೆ. ಈ ಸಾಲ ಮರುಪಾವತಿಸಿ ಎಂದು ಕೆಲವರು ನಿರಂತರವಾಗಿ ಕರೆ ಮಾಡುತ್ತಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.