ಹುಬ್ಬಳ್ಳಿ: ಪತಿ ಹಾಗೂ ಅತ್ತೆ ಸೇರಿ ಔಷಧಿ ಎಂದು ಗರ್ಭಿಣಿಗೆ ವಿಷ ಕುಡಿಸಿ ಭ್ರೂಣ ಹತ್ಯೆ ಮಾಡಿರುವ ಅಮಾನವೀಯ ಘಟನೆ ಹಳೇ ಹುಬ್ಬಳ್ಳಿಯ ಅಲ್ತಾಫ್ ಫ್ಲಾಟ್ನಲ್ಲಿ ನಡೆದಿದೆ.
ಪತಿ, ಇಮಾಮ್ ಖಾನಜಾದೆ ಹಾಗೂ ಅತ್ತೆ, ಫಾತಿಮಾ ಖಾನಜಾದೆ ಈ ಕೃತ್ಯ ಎಸಗಿದವರು. ಶಹಿನಾ ಹಾಗೂ ಇಮಾಮ್ ಮದುವೆಯಾಗಿ ವರ್ಷ ಕಳೆದಿತ್ತು. ಮದುವೆ ನಂತರ ಇಮಾಮ್ ಹಾಗೂ ಅವರ ತಾಯಿ ಶಹಿನಾ ಅವರಿಗೆ ಹಿಂಸೆ ನೀಡುತ್ತಿದ್ದರು. ಜೊತೆಗೆ ಜಗಳವಾಡಿ ಶಹಿನಾ ಅವರನ್ನು ತವರು ಮನೆಗೆ ಕಳುಹಿಸಿದ್ದರು. ನಂತರ ಹಿರಿಯರು ರಾಜಿ ಮಾಡಿಸಿ ಮತ್ತೆ ಮನೆಗೆ ಬಿಟ್ಟಿದ್ದರು ಎಂಬ ಮಾಹಿತಿ ಇದೆ.