ಕರ್ನಾಟಕ

karnataka

ETV Bharat / city

ಜನರ ಹಿತಾಸಕ್ತಿಗಿಂತ ನಿಮಗೆ ವೋಟ್​ ಮುಖ್ಯ.. ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಶೆಟ್ಟರ್ ಕಿಡಿ - former chief minister jagadish shetter reaction over congress mekedatu rally

ಅಧಿವೇಶನದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಈಗ ಬೀದಿ ಹೋರಾಟ ಮಾಡ್ತಿದ್ದಾರೆ. ಕೊರೊನಾ ಹೆಚ್ಚಾಗ್ತಿದೆ. ಇದೆಲ್ಲಾ ಈಗ ಬೇಡವಾಗಿತ್ತು ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅವರು ಕಾಂಗ್ರೆಸ್​ ಪಾದಯಾತ್ರೆ ವಿರುದ್ಧ ಕಿಡಿಕಾರಿದ್ದಾರೆ.

shetter
ಜಗದೀಶ್​ ಶೆಟ್ಟರ್

By

Published : Jan 10, 2022, 3:59 PM IST

ಹುಬ್ಬಳ್ಳಿ:ರಾಜ್ಯದಲ್ಲಿ ಕೊರೊನಾ ನಿರ್ಬಂಧಗಳನ್ನು ಹೇರಿದ್ದರೂ ಕಾಂಗ್ರೆಸ್​ ಪಾದಯಾತ್ರೆ ನಡೆಸುತ್ತಿರುವುದು ಸರಿಯಲ್ಲ. ಕಾಂಗ್ರೆಸ್​ನ ಈ ನಡೆಯ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಠಕ್ಕೆ ಬಿದ್ದು ಪಾದಯಾತ್ರೆ ಮಾಡುತ್ತಿದೆ. ಕೊರೊನಾ ಸಮಯದಲ್ಲಿ ಇದು ಬೇಡವಾಗಿತ್ತು. ರಾಜಕೀಯ ಹಿನ್ನೆಲೆಯಲ್ಲಿ ಈ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಜಗದೀಶ್​ ಶೆಟ್ಟರ್ ಕಿಡಿ

ಹಠಕ್ಕೆ ಬಿದ್ದು ಪಾದಯಾತ್ರೆ ಮಾಡುತ್ತಿರುವುದು ಏಕೆ ಎನ್ನುವುದು ಅರ್ಥ ಆಗ್ತಿಲ್ಲ. ಕಾಂಗ್ರೆಸ್​​ಗೆ ನಾಡಿನ ಹಿತಾಸಕ್ತಿ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಪ್ರಚಾರ, ವೋಟ್ ಬ್ಯಾಂಕ್​ಗಾಗಿ ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆ ಬಿಟ್ಟು ಮಾತುಕತೆಗೆ ಬನ್ನಿ. ರಚನಾತ್ಮಕ ಸಲಹೆ ನೀಡಿ. ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಮಾಡೋಣ ಎಂದರು.

ಪಾದಯಾತ್ರೆಯನ್ನು ತಡೆಯುವುದಕ್ಕೆ ನಾವು ಹೋಗುವುದಿಲ್ಲ. ಸುಮ್ಮನೆ ಗೊಂದಲ ಆಗಬಾರದು ಎಂದು ಬಿಟ್ಟಿದ್ದೇವೆ. ಸಾವಿರಾರು ಜನರನ್ನು ಕರೆದುಕೊಂಡು ಹೋಗಿ ಪಾದಯಾತ್ರೆ ಮಾಡಲಾಗುತ್ತಿದೆ. ಕೊರೊನಾ ತಡೆಯಲು ನಿರ್ಬಂಧ ಹೇರಿ ಜನಸಾಮಾನ್ಯರಿಗೆ ದಂಡ ಹಾಕುತ್ತೇವೆ. ರಾಜಕೀಯ ಮುಖಂಡರೇ ಹೀಗೆ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದರು.

ಅಧಿವೇಶನದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಈಗ ಬೀದಿ ಹೋರಾಟ ಮಾಡ್ತಿದ್ದಾರೆ. ಕೊರೊನಾ ಹೆಚ್ಚಾಗ್ತಿದೆ. ಇದೆಲ್ಲಾ ಈಗ ಬೇಡವಾಗಿತ್ತು ಎಂದು ಜಗದೀಶ್​ ಶೆಟ್ಟರ್​ ಹೇಳಿದರು.

ಇದನ್ನೂ ಓದಿ:ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಡಿಕೆಶಿ, ಸಿದ್ದರಾಮಯ್ಯ ಸೇರಿ 31 ಮಂದಿ ವಿರುದ್ಧ ಎಫ್​ಐಆರ್​ ದಾಖಲು

For All Latest Updates

TAGGED:

ABOUT THE AUTHOR

...view details