ಹುಬ್ಬಳ್ಳಿ:ಬಸ್ಗಳಲ್ಲಿ ಪ್ರಯಾಣಿಕರ ಜೇಬು ಹಾಗೂ ಬ್ಯಾಗ್ಗಳಿಗೆ ಕತ್ತರಿ ಹಾಕಿ ಹಣ ಎಗರಿಸುತ್ತಿದ್ದ ಐವರು ಮಹಿಳೆಯವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಯಾಣಿಕರಂತೆ ನಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಐವರು ಮಹಿಳೆಯರು ಪ್ರಯಾಣಿಕರಿಗೆ ಅರಿವಾಗದ ಹಾಗೆ ಕಳ್ಳತನ ಮಾಡುತ್ತಿದ್ದರು.
ಇದೀಗ ಕಳ್ಳಿಯರ ಬಂಧಿಸುವಲ್ಲಿ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ಮಹಿಳೆಯರಿಂದ 20 ಗ್ರಾಂ ತೂಕದ ಚಿನ್ನ, 1ಗ್ರಾಂ ತೂಕದ 16 ಚಿನ್ನದ ಗುಂಡುಗಳು ಹಾಗೂ 1,860 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.
ಒಂಧಿತರನ್ನು ಪಲ್ಲವಿ ಚಂದ್ರಶೇಖರ ಭಜಂತ್ರಿ, ಆಸ್ಮಾ ಮಹ್ಮದರಫೀಕ ಗದಗ, ಕೊಳದವ್ವ ಅಲಿಯಾಸ್ ಕೊಳಲಿ ಆಂಜನೇಯ ತವರಗೊಪ್ಪ, ಯಲ್ಲಮ್ಮ ಬಸವರಾಜ ಕೊಟುಗಣಸಿ ಹಾಗೂ ಪ್ರೇಮಾ ಅಲಿಯಾಸ್ ಪಾರಿಜಾತ ಅಣ್ಣಪ್ಪ ಭಜಂತ್ರಿ ಎಂದು ಗುರುತಿಸಲಾಗಿದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಹರ ಠಾಣೆ ಇನ್ಸ್ಪೆಕ್ಟರ್ ಆನಂದ ಒನಕುದ್ರೆ, ಮಹಿಳಾ ಪಿಎಸ್ಐ ಪದ್ಮಮ್ಮ ಹಾಗೂ ಸಿಬ್ಬಂದಿ ಮಹಿಳಾ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕುಂದಾ ಜೊತೆ ಕರದಂಟು ಚನ್ನಾಗಿರುತ್ತೆ ಎಂಬ ಹೆಬ್ಬಾಳ್ಕರ್ ಹೇಳಿಕೆಗೆ ಸತೀಶ್ ಜಾರಕಿಹೊಳಿ ಹಾಸ್ಯಚಟಾಕಿ