ಹುಬ್ಬಳ್ಳಿ:ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪೋಸ್ಟ್ ಆಫೀಸ್ ಹಿಂದಿರುವ ರೇಣುಕಾದೇವಿ ಫೈನಾನ್ಸ್ ಕಚೇರಿಯಲ್ಲಿ ಖದೀಮರು ದರೋಡೆ ಮಾಡಿದ್ದಾರೆ. ಮಂಜುನಾಥ ಸೊನ್ನದ ಎಂಬುವವರಿಗೆ ಸೇರಿದ ಫೈನಾನ್ಸ್ಗೆ ನುಗ್ಗಿದ ದುಷ್ಕರ್ಮಿಗಳು ಬಾಗಿಲು ಗಾಜು ಒಡೆದು 4 ಲಕ್ಷ ರೂ. ದೋಚಿದ್ದಾರೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯಲ್ಲಿ ಹಾಡಹಗಲೇ ಫೈನಾನ್ಸ್ ಕಚೇರಿಗೆ ನುಗ್ಗಿ ₹4 ಲಕ್ಷ ಲೂಟಿ
ಹುಬ್ಬಳ್ಳಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಫೈನಾನ್ಸ್ ಕಚೇರಿ ದರೋಡೆ ಪ್ರಕರಣ ನಡೆದಿದೆ.
ಫೈನಾನ್ಸ್ಗೆ ನುಗ್ಗಿ ದರೋಡೆ
ಫೈನಾನ್ಸ್ನಲ್ಲಿ ಕೆಲಸ ಮಾಡುವ ಯುವಕರು ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಪ್ರಕರಣದ ಆರೋಪಿಗಳು ಫೋನ್ ಮಾಡಿ ಮಾಲೀಕನಿಗೆ ಅವಾಜ್ ಕೂಡ ಹಾಕಿದ್ದಾರಂತೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಫೋನ್ ಸಂಭಾಷಣೆ ಆಧಾರವಾಗಿಟ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ವಿವಾಹೇತರ ಸಂಬಂಧ: ಸ್ನೇಹಿತ, ಪತ್ನಿ ಜೊತೆಗೂಡಿ ಗಂಡನ ಮೇಲೆ ದಾಳಿ