ಹುಬ್ಬಳ್ಳಿ :ನಗರದ ಸಬ್ ಜೈಲಿನಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಣ್ಣಿಗೇರಿ ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ನಡೆದಿದೆ.
ಹುಬ್ಬಳ್ಳಿ : ಜೈಲಿನಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ಹೈಕೋರ್ಟ್ನಲ್ಲಿ ಹಾಕಿದ್ದ ಬೆಲ್ ವಜಾ ಆದ ಹಿನ್ನೆಲೆ ಭಯಗೊಂಡು ತಪ್ಪಿಸಿಕೊಂಡು ಹೋಗಿ ಅಣ್ಣಿಗೇರಿಗೆ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ..
ಕೊಲೆ ಆರೋಪದಲ್ಲಿ ಬಂಧಿತನಾಗಿದ್ದ ವಿಜಯಾನಂದ ನರೇಗಲ್ ಆತ್ಮಹತ್ಯೆ ಮಾಡಿಕೊಂಡ ವಿಚಾರಣಾಧೀನ ಕೈದಿ. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2014ರಂದು ಕುರಿ ಕದಿಯಲು ಹೋಗಿದ್ದ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಇಬ್ಬರು ಕುರಿಗಾಹಿಗಳನ್ನು ವಿಜಯಾನಂದ ಹಾಗೂ ಆತನ ಜೊತೆ ಇನ್ನಿಬ್ಬರು ಸೇರಿ ಕುರಿಗಾಹಿಗಳನ್ನು ಕೊಲೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ 2014ರಿಂದ ಇಲ್ಲಿನ ಉಪಕಾರಾಗೃದಲ್ಲಿದ್ದ ವಿಜಯಾನಂದ ಆಗಸ್ಟ್ 1ರಂದು ಜೈಲು ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಹೈಕೋರ್ಟ್ನಲ್ಲಿ ಹಾಕಿದ್ದ ಬೆಲ್ ವಜಾ ಆದ ಹಿನ್ನೆಲೆ ಭಯಗೊಂಡು ತಪ್ಪಿಸಿಕೊಂಡು ಹೋಗಿ ಅಣ್ಣಿಗೇರಿಗೆ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ. ನಂತರ ಏಕಾಏಕಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲ್ವೆ ಹಳಿ ಬಳಿ ಶವ ಪತ್ತೆಯಾಗಿದೆ.