ಕರ್ನಾಟಕ

karnataka

ETV Bharat / city

ಉಪಚುನಾವಣೆ ಫಲಿತಾಂಶವೇ ತೈಲ ಬೆಲೆ ಇಳಿಕೆಗೆ ಕಾರಣ: ಡಿ.ಕೆ.ಶಿವಕುಮಾರ್​​ - DK Shivakumar

ಸರ್ಕಾರಕ್ಕೆ ಜನರೇ ಉತ್ತರ ಕೊಟ್ಟಿದ್ದಾರೆ. ಅವರ ಉತ್ತರಕ್ಕೆ ಈಗ ಸಿಎಂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಟೀಕಿಸಿದರು.

DK Shivakumar
ಡಿ.ಕೆ ಶಿವಕುಮಾರ್​​

By

Published : Nov 5, 2021, 2:35 PM IST

ಹುಬ್ಬಳ್ಳಿ:ಹಾನಗಲ್ ಗೆದ್ದಿದ್ದೇವೆ ಅನ್ನಿಸುತ್ತಿಲ್ಲ. ಮತದಾರರ ಬಗ್ಗೆ ನಂಬಿಕೆ ಇತ್ತು. ಕೊನೆಗೂ ಜನರು ಅವರಿಗೆ (ಬಿಜೆಪಿ) ಪಾಠ ಕಲಿಸಿದ್ದಾರೆ. ಹೀಗಾಗಿ ತೈಲ ಬೆಲೆ ಇಳಿಕೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ಹೇಳಿದರು.


ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾನು ಭಾಷಣ ಮಾಡುವ ವೇಳೆ ಬೋಧನೆ ಮಾಡಿಲ್ಲ. ನಿಮಗೆ ಸಹಾಯ ಆಗಿದ್ಯಾ, ಇಲ್ವ?. ಆದಾಯ ಹೆಚ್ಚಾಗಿದ್ಯಾ, ಇಲ್ವಾ? ಅಷ್ಟೇ ಕೇಳಿದ್ದು. ಅದಕ್ಕೆ ಈಗ ಜನರೇ ಉತ್ತರ ಕೊಟ್ಟಿದ್ದಾರೆ. ಅವರ ಉತ್ತರಕ್ಕೆ ಈಗ ಸಿಎಂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿದ್ದಾರೆ ಎಂದರು.

ಇನ್ನು ಹಲವು ದಿನಸಿ ವಸ್ತುಗಳ ಬೆಲೆ ಇಳಿಕೆಯಾಗಬೇಕು. ನಾನು ವೈಯಕ್ತಿಕವಾಗಿ ದೇವರಲ್ಲಿ ಬೇಡಿಕೊಂಡಿದ್ದೆ. ಭಕ್ತನಿಗೂ ದೇವರಿಗೂ ಇರುವ ವ್ಯವಹಾರ ಹೇಳಲು ಆಗಲ್ಲ. ದೇವರು ನನಗೆ ಬೇಡಿದ ವರ ಕೊಟ್ಟಿದ್ದಾನೆ.

ದೇಶದಲ್ಲಿ ಕಾಂಗ್ರೆಸ್ ಒಡೆದು ಹೋಳಾಗುತ್ತಿದೆ ಎಂಬ ಸಿಎಂ ಹೇಳಿಕೆೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಈ ಉಪಚುನಾವಣೆ ವಿಶೇಷವೇನೆಂದರೆ ಜೆಡಿಎಸ್​​ ಕ್ಷೇತ್ರವನ್ನು ಬಿಜೆಪಿಯವರು ಗೆದ್ದಿದ್ದಾರೆ. ಬಿಜೆಪಿ ಕ್ಷೇತ್ರವನ್ನು ನಾವು ಗೆದ್ದಿದ್ದೇವೆ. ಅವರೇ ಹೇಳಿದ್ದು, ನಾನು ಇಲ್ಲಿನ ಅಳಿಯ ಎಂದು. ಎಲ್ಲ ಸಚಿವರನ್ನು ಅವರೇ ಇಲ್ಲಿ ಬಿಟ್ಟುದ್ದು, ನಾನಲ್ಲ ಎಂದು ಕಿಡಿಕಾರಿದರು.

ಬಿಟ್ ಕಾಯಿನ್ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಡಿ, ಸಿಬಿಐಗೆ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಅವರೇ ಅದರ ಬಗ್ಗೆ ವಿವರಣೆ ಕೊಡಬೇಕು. ನಾನು ಯಾವುದೇ ರಾಜಕಾರಣಿ ಬಗ್ಗೆ ಮಾತನಾಡಿಲ್ಲ. ಪ್ರಕರಣ ತನಿಖೆ ಬಗ್ಗೆ ಸಾರ್ವಜನಿಕವಾಗಿ ಜನರಿಗೆ ಸ್ಪಷ್ಟಪಡಿಸಲಿ. ನಾವು ಸಹ ಆರ್​​ಟಿಐ ಮೂಲಕ ಅರ್ಜಿ ಸಲ್ಲಿಸಲಿದ್ದೇವೆ ಎಂದರು.

ಇದನ್ನೂ ಓದಿ:ದೇಶದಲ್ಲಿ ಕಾಂಗ್ರೆಸ್ ಒಡೆದು ಹೋಳಾಗುತ್ತಿದೆ: ಡಿಕೆಶಿಗೆ ಟಾಂಗ್ ಕೊಟ್ಟ ಸಿಎಂ

ABOUT THE AUTHOR

...view details