ಧಾರವಾಡ :ಮಹಿಳೆಯ ಕೈ ಹಿಡಿದು ಜೆಡಿಎಸ್ ಮುಖಂಡ ಎಳೆದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳಿ-ಧಾರವಾಡ ಮಹಾನಗರ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ್ ಹುಣಸಿಮರದ ಪ್ರತಿಕ್ರಿಯಿಸಿದ್ದಾರೆ.
ಧಾರವಾಡದ ಸರ್ಕೀಟ್ ಹೌಸ್ನಲ್ಲಿ ಗುರುರಾಜ್ ಹುಣಸಿಮರದ ಮಾತನಾಡಿರುವುದು.. ಶ್ರೀಕಾಂತ ಜಮನಾಳ ಎಂಎಲ್ಎ ಎಲೆಕ್ಷನ್ಗೆ ಕೊನೆಯ ಬಾರಿ ನಿಂತಿದ್ದರು. ಆ ಬಳಿಕ ಯಾವುದೇ ಸಭೆ-ಸಮಾರಂಭಗಳಿಗೆ ಬಂದಿಲ್ಲ. ಯಾವ ಸಭೆಗೂ ಅವರನ್ನು ಆಹ್ವಾನ ಮಾಡಿಲ್ಲ. ಈಗ ನಡೆದಿರುವ ಘಟನೆ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡನ ವಿರುದ್ಧ ಮಹಿಳೆಯಿಂದ ಪೊಲೀಸರಿಗೆ ದೂರು
ಧಾರವಾಡದ ಸರ್ಕೀಟ್ ಹೌಸ್ನಲ್ಲಿ ಮಾತನಾಡಿದ ಅವರು, ಈಗಾಗಲೇ ಮೇಲಿನವರಿಗೆ ವರದಿ ಕಳುಹಿಸಿದ್ದೇವೆ. ವರಿಷ್ಠರ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ. ಆ ರೀತಿ ಮಹಿಳೆಯನ್ನು ಎಳೆದಾಡಿದ್ದು ತಪ್ಪು.
ಆದರೆ, ಅವರಿಬ್ಬರ ವೈಯಕ್ತಿಕ ವಿಚಾರ ಏನಿದೆಯೋ ಅದು ಸಹ ನಮಗೆ ಗೊತ್ತಿಲ್ಲ. ನಾಳೆ ಬೆಂಗಳೂರಿನಲ್ಲಿ ಪಕ್ಷದ ಸಭೆಯೂ ಇದೆ. ಆ ಸಭೆಯಲ್ಲಿಯೂ ವಿಷಯ ಪ್ರಸ್ತಾಪ ಮಾಡುತ್ತೇನೆ ಎಂದರು.
ಇವಿಎಂ ಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹುಣಸಿಮರದ, ಪಾಲಿಕೆ ಚುನಾವಣೆ ವೇಳೆ ಚುನಾವಣಾ ಆಯೋಗದ ಅಧಿಕಾರಿಗಳು ಸರ್ಕಾರದ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.